ಕರ್ನಾಟಕ

karnataka

ETV Bharat / state

ವಿವಾದಾತ್ಮಕ ಹೇಳಿಕೆ: ಕನಕಗಿರಿ ಪೊಲೀಸ್​ ಠಾಣೆಯಲ್ಲಿ ಐವರ ವಿರುದ್ಧ ಎಫ್​ಐಆರ್​ ದಾಖಲು! - ಗಂಗಾವತಿ ಅಪರಾಧ ಸುದ್ದಿ

ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಕನಕಗರಿ ಪೊಲೀಸ್​ ಠಾಣೆಯಲ್ಲಿ ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

FIR against five persons at Kanakagiri police station, Controversial statement, Gangavati crime news, Koppal district news,  ಕನಕಗಿರಿ ಪೊಲೀಸ್​ ಠಾಣೆಯಲ್ಲಿ ಐವರ ವಿರುದ್ಧ ಎಫ್​ಐಆರ್​ ದಾಖಲು, ವಿವಾದಾತ್ಮಕ ಹೇಳಿಕೆ, ಗಂಗಾವತಿ ಅಪರಾಧ ಸುದ್ದಿ, ಕೊಪ್ಪಳ ಜಿಲ್ಲಾ ಸುದ್ದಿ,
ಕನಕಗಿರಿ ಪೊಲೀಸ್​ ಠಾಣೆಯಲ್ಲಿ ಐವರ ವಿರುದ್ಧ ಎಫ್​ಐಆರ್​ ದಾಖಲು

By

Published : Feb 8, 2022, 2:21 PM IST

ಗಂಗಾವತಿ: ಇತ್ತಿಚೇಗೆ ಭಾಷಣದಲ್ಲಿ ಹೇಳಿದ್ದ ಮಾತು ಇದೀಗ ವಿವಾದ ಸೃಷ್ಟಿಯಾಗಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಮುದಾಯದ ಸಭೆಯೊಂದರಲ್ಲಿ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇದೀಗ ಈ ವಿಡಿಯೋ ಕನಕಗಿರಿಯಲ್ಲಿ ಕೋಮು ಸಾಮರಸ್ಯ ಕದಡುವ ಆತಂಕದಿಂದ ಐವರ ಮೇಲೆ ಪ್ರಕರಣ ದಾಖಲಾಗಿದೆ.

ಕನಕಗಿರಿ ತಾಲೂಕಿನ ಬೆನಕನಾಳ ಗ್ರಾಮದ ಶಿವಾನಂದ ಶರಣಪ್ಪ ವಂಕಲಕುಂಟಿ ಎಂಬ ವ್ಯಕ್ತಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಓದಿ:ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ: ಕಾಂಗ್ರೆಸ್ ಸದಸ್ಯರು ವಾಕ್​ಔಟ್​

ಭಾಷಣದ ಆಡಿಯೋವೊಂದನ್ನು ತಮ್ಮ ವಾಟ್ಸ್​​ಆ್ಯಪ್​ ಸ್ಟೇಟಸ್​ನಲ್ಲಿ ಇಟ್ಟುಕೊಳ್ಳುವ ಮೂಲಕ ಆರೋಪಿಗಳು ಎರಡು ಸಮುದಾಯದ ಮಧ್ಯೆ ಸಾಮರಸ್ಯ ಕದಡುವ ಕೆಲಸಕ್ಕೆ ಕೈಹಾಕಿದ್ದಾರೆ. ವಾಸ್ತವದಲ್ಲಿ ಸಮುದಾಯ ಒಗ್ಗೂಡಿಸುವ ಉದ್ದೇಶಕ್ಕೆ ನೀಡಿದ್ದ ಹೇಳಿಕೆಯನ್ನು ತಿರುಚಿ ಈ ಯುವಕರು ತಮ್ಮ ವಾಟ್ಸ್​​ಆ್ಯಪ್​ ಸ್ಟೇಟಸ್​ನಲ್ಲಿ ಇಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ದೂರುದಾರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.

ವಾಸ್ತವದಲ್ಲಿ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶಕ್ಕೆ ನೀಡಿದ್ದ ಹೇಳಿಕೆ ತಿರುಚಿ ಈ ಯುವಕರು ತಮ್ಮ ವಾಟ್ಸ್​​ಆ್ಯಪ್​ ಸ್ಟೇಟಸ್​ನಲ್ಲಿ ಇಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ದೂರುದಾರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.

ABOUT THE AUTHOR

...view details