ಕೊಪ್ಪಳ: ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಜನರು ಅನಗತ್ಯವಾಗಿ ಓಡಾಡದಂತೆ ಪೊಲೀಸರು ನಾನಾ ಪ್ರಯತ್ನ ಮಾಡಿದರೂ ಕೊಪ್ಪಳದಲ್ಲಿ ಜನರು ಅನಗತ್ಯವಾಗಿ ಓಡಾಡೋದು ಎರಡು-ಮೂರು ದಿನಗಳಿಂದ ಸ್ವಲ್ಪ ಜಾಸ್ತಿಯಾಗಿದೆ.
ಹೀಗಾಗಿ ನಾನಾ ನೆಪಗಳನ್ನು ಹೇಳಿಕೊಂಡು, ಸಕಾರಣವಿಲ್ಲದಿದ್ದರೂ ನಗರದಲ್ಲಿ ಓಡಾಡುವ ವಾಹನ ಸವಾರರಿಗೆ ದಂಡ ಹಾಕುತ್ತಿದ್ದಾರೆ.
ಲಾಕ್ಡೌನ್ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಕೆಲವೊಂದಿಷ್ಟು ವಿಷಯಕ್ಕೆ ಓಡಾಡೋದಕ್ಕೆ ಅವಕಾಶವಿರುವುದರಿಂದ ಆ ವಿಷಯಗಳನ್ನು ಮುಂದಿಟ್ಟುಕೊಂಡು ಓಡಾಡ್ತಿದ್ದಾರೆ. ಹೀಗಾಗಿ ಪೊಲೀಸರು ಸಕಾರಣವಿಲ್ಲದೆ ಓಡಾಡೋರಿಗೆ ಡ್ರೈವಿಂಗ್ ಲೈಸನ್ಸ್, ವಾಹನ ದಾಖಲೆಗಳನ್ನು ಕೇಳಿ ದಂಡ ವಿಧಿಸುತ್ತಿದ್ದಾರೆ.
ದಂಡ ಹಾಕ್ತಾರೆ ಎಂಬ ಕಾರಣಕ್ಕಾದರೂ ಜನರು ಅನಗತ್ಯ ಓಡಾಟ ಮಾಡುವುದನ್ನಾದರೂ ನಿಲ್ಲಿಸ್ತಾರಾ ಎಂಬುದು ಪೊಲೀಸರ ನಿರೀಕ್ಷೆಯಾಗಿದೆ.