ಗಂಗಾವತಿ (ಕೊಪ್ಪಳ):ಮತದಾನಕ್ಕೆಂದು ಆನೆಗೊಂದಿ ಮತ ಕೇಂದ್ರಕ್ಕೆ ಬಂದ ವ್ಯಕ್ತಿಯೊಬ್ಬ ಮತಪತ್ರ ಹರಿದು ಹಾಕಿದ ಘಟನೆ ಬೆನ್ನಲ್ಲೇ ಇಂತಹದ್ದೇ ಇನ್ನೊಂದು ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆನೆಗೊಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ 1ರಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ತಿಮ್ಮಪ್ಪ ಕೃಷ್ಣಾರೆಡ್ಡಿ ಎಂಬ ವ್ಯಕ್ತಿ ಮತಪತ್ರ ಹರಿದು ಹಾಕಿರುವುದಾಗಿ ಆರೋಪಿಸಿ ಚುನಾವಣಾ ಅಧಿಕಾರಿ ರಾಘವೇಂದ್ರ ರೆಡ್ಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.