ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿದೆ. 9 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ: ಮಾರಾಮಾರಿಗೆ ಕಾರಣವಾದ ಯುವಕ-ಯುವತಿಯ ಪ್ರೇಮ ಪ್ರಕರಣ - ಪ್ರೇಮ ಪ್ರಕರಣಕ್ಕೆ ಸಂಬಂಧ ಗಲಾಟೆ
ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿದ್ದು, 9 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿವರ: ಗಾಣಧಾಳ ಗ್ರಾಮದಲ್ಲಿ ಕುರುಬ ಸಮುದಾಯದ ಯುವತಿ ಹಾಗೂ ವಾಲ್ಮೀಕಿ ಸಮುದಾಯದ ಯುವಕ ಪ್ರೀತಿಸುತ್ತಿದ್ದರು. ಯುವತಿ ಮನೆಯವರಿಗಿದು ಇಷ್ಟವಿರಲಿಲ್ಲ. ಮನೆಯವರ ವಿರೋಧ ಲೆಕ್ಕಿಸದ ಜೋಡಿ ಕೆಲವು ದಿನಗಳ ಹಿಂದೆ ಊರು ಬಿಟ್ಟು ಓಡಿ ಹೋಗಿದ್ದರು. ನಂತರ ಗ್ರಾಮಕ್ಕೆ ಮರಳಿದಾಗ ರಾಜಿ ಪಂಚಾಯತಿ ಮಾಡಿ ಯುವಕ-ಯುವತಿಯನ್ನು ಬೇರೆ ಮಾಡಲಾಗಿದೆ. ಇದೇ ಸಿಟ್ಟಿನಲ್ಲಿದ್ದ ಯುವತಿ ಕಡೆಯವರು ಯುವಕನ ಕಡೆಯವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರಂತೆ. ಹಲ್ಲೆಗೊಳಗಾದ ಹೊನ್ನಮ್ಮ ಬೇವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್‌ನಲ್ಲಿ 2 ಬಾರಿ ಚಿನ್ನದ ಪದಕ ವಿಜೇತ, ಅಥ್ಲೀಟ್ ಹರಿ ಚಂದ್ ನಿಧನ