ಕರ್ನಾಟಕ

karnataka

ETV Bharat / state

ರಥಕ್ಕೆ ಹೂ ಹಾಕಲು ಘರ್ಷಣೆ, ಬಡಿದಾಟದಲ್ಲಿ 6 ಜನರಿಗೆ ಗಾಯ - undefined

ಜಾತ್ರೆಯ ವೇಳೆ ರಥಕ್ಕೆ ಹೂ ಹಾಕುವ ವಿಚಾರವಾಗಿ ನಾ ಮುಂದು ತಾ ಮುಂದು ಎಂದು ಆರಂಭಗೊಂಡ ಗಲಾಟೆ, 6 ಜನ ಆಸ್ಪತ್ರೆ ಸೇರುವ ಮೂಲಕ ಅಂತ್ಯಗೊಂಡಿದೆ. ಮೈಯಲ್ಲಿ ರಕ್ತ ಸುರಿಯುವಂತೆ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದಾಡಿಕೊಂಡ ಎರಡು ಕೋಮಿನ ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

6 ಜನ ಆಸ್ಪತ್ರೆಗೆ ದಾಖಲು

By

Published : May 1, 2019, 10:08 PM IST

ಕೊಪ್ಪಳ: ಜಾತ್ರೆಯ ಸಂದರ್ಭ ರಥಕ್ಕೆ ಹೂವಿನ‌ ಹಾರ ಹಾಕುವ ವಿಚಾರವಾಗಿ ಪರಸ್ಪರ ಎರಡು ವಿಭಿನ್ನ ಕೋಮಿನ‌ ನಡುವೆ ನಡೆದ ಸಂಘರ್ಷದಲ್ಲಿ ಆರು ಜನರು ಗಾಯಗೊಂಡ ಘಟನೆ‌ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಇಂದು ದುರ್ಗಮ್ಮ ಮತ್ತು ದ್ಯಾಮಮ್ಮ ದೇವರ ಜಾತ್ರೆಯಿತ್ತು. ಈ ವೇಳೆ ರಥಕ್ಕೆ ಎರಡು ಕೋಮಿನವರು ತಲಾ ಒಂದೊಂದು ಹೂವಿನ ಹಾರ ತಂದಿದ್ದರು. ಮೊದಲು ಹಾರ ಹಾಕುವ ವಿಚಾರಕ್ಕೆ ಈ ಎರಡೂ ಕೋಮಿನವರ ನಡುವೆ ನಡೆದ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದು ವಿಕೋಪಕ್ಕೆ ತಿರುಗಿ ಕಲ್ಲು ಹಾಗೂ ಕಟ್ಟಿಗೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು

ಈ ವೇಳೆ ಗಲಾಟೆ ಬಿಡಿಸಲು ಹೋದವರೂ ಸೇರಿದಂತೆ ಘಟನೆಯಲ್ಲಿ 6 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ‌ಯ ಹಿನ್ನೆಲೆಯಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details