ಕರ್ನಾಟಕ

karnataka

ETV Bharat / state

ಹನುಮ ಭಕ್ತರಿಗಾಗಿ ಸಿದ್ಧವಾಗ್ತಿವೆ 15 ಸಾವಿರ ಲಾಡು...! - _Fifteen_Thousand_Ladu_in anjanadri hills news

ಹನುಮ ಮಾಲೆ ಕಾರ್ಯಕ್ರಮ ಹಿನ್ನೆಲೆ ಅಂಜನಾದ್ರಿ ದೇಗುಲದಿಂದ ಹನುಮ ಭಕ್ತರಿಗೆ ವಿತರಿಸಲು 15 ಸಾವಿರ ಸಿಹಿ ಲಾಡುಗಳ ತಯಾರಿಸಲಾಗ್ತಿದೆ

ladu
ಹನುಮನ ಭಕ್ತರಿಗಾಗಿ 15 ಸಾವಿರ ಲಾಡು

By

Published : Dec 7, 2019, 11:32 AM IST

ಗಂಗಾವತಿ/ಕೊಪ್ಪಳ: ಡಿ.9ರಂದು ನಡೆಯಲಿರುವ ಹನುಮ ಮಾಲೆ ಕಾರ್ಯಕ್ರಮಕ್ಕೆ ಅಂಜನಾದ್ರಿ ದೇಗುಲದಿಂದ ಹನುಮ ಭಕ್ತರಿಗೆ ವಿತರಿಸಲು 15 ಸಾವಿರ ಸಿಹಿ ಲಾಡುಗಳ ತಯಾರಿಸಲಾಗ್ತಿದೆ

ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಹನುಮ ಜಯಂತಿ ನಿಮಿತ್ತ ಸಕಲ ಏರ್ಪಾಡುಗಳನ್ನು ಮಾಡಿಕೊಂಡಿದೆ. ಈ ಮಧ್ಯೆ ಏಕಕಾಲಕ್ಕೆ 30 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇರಿಸಿಕೊಂಡಿರುವ ದೇವಸ್ಥಾನದ ಆಡಳಿತ ಮಂಡಳಿ ಇದೀಗ ಲಾಡು ತಯಾರಿಕೆಯಲ್ಲಿ ನಿರತವಾಗಿದೆ. ಅಂಜನಾದ್ರಿ ಬೆಟ್ಟದ ಸಮೀಪ ಅಂದರೆ, ರಾಂಪುದ ಸಮೀಪ ಇರುವ ವೇದಪಾಠ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಲಡ್ಡು ತಯಾರಿಕೆ ನಡೆದಿದೆ. ದಿನಕ್ಕೆ ಮೂರರಿಂದ ನಾಲ್ಕು ಸಾವಿರ ಲಡ್ಡು ತಯಾರಿಸಲಾಗುವುದು ಎಂದು ದೇಗುಲದ ಸಿಬ್ಬಂದಿ ತಿಳಿಸಿದ್ದಾರೆ. ವೇದಪಾಠ ಶಾಲೆಯಲ್ಲಿ ತಯಾರಾಗುವ ಲಾಡುಗಳನ್ನು ಸುಮಾರು 450 ಮೆಟ್ಟಿಲು ಇರುವ ಬೆಟ್ಟಕ್ಕೆ ಹೊತ್ತೊಯ್ದು ಅಲ್ಲಿ ಭಕ್ತರಿಗಾಗಿ ಪ್ರತ್ಯೇಕ ಕೌಂಟರ್ ತೆಗೆದು ವಿತರಿಸಲಾಗುತ್ತಿದೆ.

ಹನುಮನ ಭಕ್ತರಿಗಾಗಿ 15 ಸಾವಿರ ಲಾಡು

ಕೇವಲ ಲಡ್ಡು ಮಾತ್ರವಲ್ಲ, ಬರುವ ಭಕ್ತರಿಗೆ ಬೆಟ್ಟದ ಕೆಳಗೆ ಹದಿನೈದು ಕೌಂಟರ್ ತೆಗೆದು ಊಟದ ವ್ಯವಸ್ಥೆ ಮಾಡಲಾಗಿದೆ. ಅಂಜನಾದ್ರಿ ಬೆಟ್ಟವನ್ನು ಜಿಲ್ಲಾಧಿಕಾರಿ ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಿದ ಬಳಿಕ ಈಗ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ದೇಗುಲದ ಆಡಳಿತ ಮಂಡಳಿ ಭಕ್ತರಿಗೆ ಲಾಡು ಪ್ರಸಾದ ವಿತರಿಸಲು ಐದು ಸಾವಿರ ಬಟ್ಟೆ ಬ್ಯಾಗ್ ತರಿಸಿಕೊಂಡಿದೆ.ಇನ್ನು ಕಳೆದ ಎರಡು ವರ್ಷಗಳ ಹಿಂದೆ ಹನುಮಮಾಲೆಯ ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದು ಘರ್ಷಣೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈಗ ಸಕಲ ಬಂದೋಬಸ್ತ್ ಕೈಗೊಳ್ಳುವ ಮೂಲಕ ಜಿಲ್ಲಾಡಳಿತ ಸುಸೂತ್ರವಾಗಿ ಹನುಮ ಜಯಂತಿ ಮುಗಿಸಲು ಯೋಜನೆ ರೂಪಿಸಿಕೊಂಡಿದೆ.

For All Latest Updates

TAGGED:

ABOUT THE AUTHOR

...view details