ಕೊಪ್ಪಳ:ಉತ್ತಮ ಕೃಷಿಗೆ ಫಲವತ್ತಾದ ಭೂಮಿ ಅವಶ್ಯಕ. ಆದರೆ, ಆ ಫಲವತ್ತಾದ ಭೂಮಿಯಲ್ಲಿ ಉತ್ತಮ ಫಲಿತಾಂಶ ದೊರೆಯಬೇಕೆಂದರೆ ಅದನ್ನು ಹೂಳಲು ಉತ್ತಮವಾದ ಜೋಡೆತ್ತುಗಳ ಅವಶ್ಯಕತೆಯಿದೆ. ಆದರೆ ಎತ್ತುಗಳಿಲ್ಲದಿದ್ದರೂ ಕೃಷಿ ಚಟುವಟಿಕೆ ಕಷ್ಟಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ.
ಯಾವ ಜೋಡೆತ್ತುಗಳಿಗೇನು ಕಮ್ಮಿಯಿಲ್ಲ ಇವರ ಮೋಟಾರ್ ಎತ್ತು ಕೊಪ್ಪಳ ಜಿಲ್ಲೆಯ ನೂತನ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದ ರೈತ ಮಹಾಂತೇಶ ಗೌಡ ಪೊಲೀಸ್ ಪಾಟೀಲ್ ಎಂಬವರ ಎತ್ತಿನ ಬದಲಿಗೆ ಬೈಕ್ ಬಳಸಿಕೊಂಡು ಮೆಕ್ಕೆಜೋಳದ ಯಡಿ ಹೊಡೆಯುವುದರಲ್ಲಿ ತೊಡಗಿರುವುದು ಎಲ್ಲರ ಗಮನ ಸೆಳೆದಿದೆ.
ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕೋಮಲಾಪುರ ಗ್ರಾಮದಲ್ಲಿ ಸಕಾಲದಲ್ಲಿ ಎತ್ತುಗಳು ದೊರೆಯುತ್ತಿಲ್ಲ. ಅಲ್ಲದೇ ಈಗ ಬಾಡಿಗೆ ಸಹ ದುಬಾರಿಯಾಗಿದೆ. ಇದರಿಂದಾಗಿ ರೈತ ಮಹಾಂತೇಶ ಗೌಡ ಪಾಟೀಲ್ ಅವರು, ತಮ್ಮ ಮನೆಯಲ್ಲಿದ್ದ ಹಳೆಯ ಬೈಕ್ ಗೆ ಎರಡು ಕುಂಟೆಗಳನ್ನು ಕಟ್ಟಿ ಯಡೆ ಹೊಡೆದಿದ್ದಾರೆ.
ಸುಮಾರು ಒಂದೂವರೆ ಲೀಟರ್ ಪೆಟ್ರೋಲ್ನಲ್ಲಿ ಎರಡು ಎಕರೆಯಲ್ಲಿ ಯಡಿ ಹೊಡೆಯಬಹುದು. ಅಲ್ಲದೇ, ಸರಿಯಾದ ಸಮಯದಲ್ಲಿ ಕೆಲಸವೂ ಪೂರ್ಣವಾಗುತ್ತದೆ. ಎತ್ತಿನ ಮೂಲಕ ಒಂದು ಬಾರಿ ಯಡಿ ಹೊಡೆಯಲು 1200 ರುಪಾಯಿ ಬಾಡಿಗೆ ಕೊಡಬೇಕು. ಆದರೆ, ಬೈಕ್ ಬಳಸಿಕೊಂಡು ಯಡಿ ಹೊಡೆದರೆ ಖರ್ಚು ಬಹಳ ಕಡಿಮೆಯಾಗುತ್ತದೆ. ಹೀಗಾಗಿ ಇದು ಉತ್ತಮ ಉಪಾಯ ಎನ್ನುತ್ತಾರೆ ರೈತ ಮಹಾಂತೇಶಗೌಡ ಪೊಲೀಸ್ ಪಾಟೀಲ್ ಅವರು.
ಕೃಷಿಯಲ್ಲಿ ಹೆಚ್ಚು ಹೆಚ್ಚು ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ಎಲ್ಲ ರೈತರಿಗೂ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ಒಂದಿಷ್ಟು ಉಪಾಯಗಳನ್ನು ಬಳಸಿಕೊಂಡು ನಮ್ಮಲ್ಲಿರುವ ವಸ್ತು ಯಂತ್ರಗಳನ್ನೇ ಸದುಪಯೋಗಪಡಿಸಿಕೊಂಡರೆ ಸಹಾಯವಾಗುತ್ತದೆ.