ಕೊಪ್ಪಳ: ಕೊಪ್ಪಳ ತಾಲೂಕಿನ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣ ಪಾವತಿಸಿದ್ದರು. ಆದರೆ, ಬೇರೆ ಗ್ರಾಮದ ರೈತರಿಗೆ ಬೆಳೆವಿಮೆ ಹಣ ಬಂದರೂ ಈ ಗ್ರಾಮದ ರೈತರಿಗೆ ಹಣ ಬಾರದೇ ಕಂಗಲಾಗಿದ್ದಾರೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಣ ಸಿಗದೇ ಕಂಗಲಾದ ರೈತರು - koppal news
ಕೊಪ್ಪಳ ತಾಲೂಕಿನ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣ ಪಾವತಿಸಿದ್ದರು. ಆದರೆ, ಬೇರೆ ಗ್ರಾಮದವರಿಗೆ ಬೆಳೆವಿಮೆ ಹಣ ಬಂದಿದ್ದರೆ, ಈ ರೈತರು ತಮಗೆ ಹಣ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2018-19 ನೇ ಸಾಲಿನಲ್ಲಿ ಬೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ತಮ್ಮ ಜಮೀನಿನ ಬೆಳೆಗೆ ಅನುಗುಣವಾಗಿ ರೈತರು ವಿಮೆಯ ಪ್ರಿಮಿಯಂ ಹಣವನ್ನು ಪಾವತಿಸಿದ್ದರು. ಮಳೆ ಇಲ್ಲದೆ ಬೆಳೆಹಾನಿಯಾದಾಗ ಬೆಳೆವಿಮೆ ಬರುತ್ತೆ ಎಂದು ಕೊಂಚ ನಿರಾಳರಾಗಿದ್ದರು. ಆದರೆ, ಆ ಹಣ ಬಂದಿಲ್ಲ. ಪಕ್ಕದ ಗ್ರಾಮಗಳ ರೈತರಿಗೆ ಬೆಳೆ ವಿಮೆ ಹಣ ಬಂದಿದೆ. ಅವರೊಂದಿಗೆ ನಾವು ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣವನ್ನು ಪಾವತಿಸಿದ್ದೆವು. ಆದರೆ, ಬೆಟಗೇರಿ ಹಾಗೂ ಮೋರನಾಳ ಗ್ರಾಮದ ರೈತರಿಗೆ ಮಾತ್ರ ಬೆಳೆ ವಿಮೆ ಬಂದಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.