ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್‌ಗಳನ್ನೇ ಕಾಲುವೆಗಿಳಿಸಿ ಹೂಳೆತ್ತಿದ ರೈತರು: ಗಂಗಾವತಿಯಲ್ಲಿ ವಿಭಿನ್ನ ಪ್ರತಿಭಟನೆ

ಗಂಗಾವತಿ ತಾಲೂಕಿನಲ್ಲಿ ಕಾಲುವೆಯಲ್ಲಿ ಹೂಳೆತ್ತುವ ಮೂಲಕ ರೈತರು ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

Farmers protested against irrigation department officers in Gangavathi
ರೈತರಿಂದ ವಿಭಿನ್ನ ಪ್ರತಿಭಟನೆ

By

Published : Jul 12, 2021, 8:49 PM IST

ಗಂಗಾವತಿ: ಕಾಲುವೆಯಲ್ಲಿ ಹೂಳೆತ್ತುವ ಮೂಲಕ ರೈತರು ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

ನೀರಾವರಿ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

ತಾಲೂಕಿನ ಶ್ರೀರಾಮನಗರದ ಮೂಲಕ ಹಾದು ಹೋಗಿರುವ ತುಂಗಾಭದ್ರಾ ಎಡದಂಡೆಯ ನಂಬರ್ 25ನೇ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದಂತೆ ಕಸ-ಕಡ್ಡಿ, ಹೂಳು ತುಂಬಿದೆ.

ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ರೈತರು ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಬೇಸತ್ತ ರೈತರು ತಮ್ಮ ಟ್ರ್ಯಾಕ್ಟರ್​ಗಳನ್ನು ಕಾಲುವೆಗೆ ಇಳಿಸಿ ಹೂಳೆತ್ತುವ ಮೂಲಕ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಕೆಳ ಭಾಗದ ಹತ್ತಾರು ಗ್ರಾಮಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ರೈತರು ವಿವರಣೆ ನೀಡಿದರು.

ABOUT THE AUTHOR

...view details