ಗಂಗಾವತಿ:ತುಂಗಭದ್ರಾ ಎಡದಂಡೆ ಕಾಲುವೆಗೆ ಮಾರ್ಚ್ 31ರವರೆಗೆ ಮಾತ್ರವಲ್ಲ, ರೈತರ ಬೆಳೆ ಬರುವವರೆಗೂ ನೀರು ಹರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರೈತರ ಹಿತಾರಕ್ಷಣಾ ವೇದಿಕೆಯಿಂದ ನಗರದ ಸಿಬಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಳೆ ಬರುವವರೆಗೂ ನೀರು ಬಿಡಬೇಕು: ರೈತರ ಹಿತಾರಕ್ಷಣ ವೇದಿಕೆ ಒತ್ತಾಯ
ತುಂಗಭದ್ರಾ ಎಡದಂಡೆ ಕಾಲುವೆಗೆ ರೈತರ ಬೆಳೆ ಬರುವವರೆಗೂ ನೀರು ಹರಿಸಬೇಕೆಂದು ಒತ್ತಾಯಿಸಿ, ರೈತ ಸಂಘಟನೆಗಳು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದವು
ಪ್ರತಿಭಟನೆ
ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ನೀರಿದೆ. ಆದರೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮತ್ತೆ ಜನವರಿಯಲ್ಲಿ ಸಭೆ ಕರೆದು ನೀರಿನ ಲಭ್ಯತೆ ಆಧಾರಿಸಿ ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಧರಣಿಕಾರರು ದೂರಿದರು.
ರೈತ ಮುಖಂಡ ಶರಣಗೌಡ ಯರಡೋಣಿ ಮಾತನಾಡಿ, ಈಗಾಗಲೇ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಇರುವ ನೀರಿನಲ್ಲಿ ಎರಡನೇ ಬೆಳೆ ಬೆಳೆದರೂ ನೀರು ಉಳಿಸುವಷ್ಟಿದೆ. ಆದರೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನೀರನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.