ಕರ್ನಾಟಕ

karnataka

ETV Bharat / state

ಟೊಮ್ಯಾಟೋ ದರ ದಿಢೀರ್‌ ಕುಸಿತ: ಕೊಪ್ಪಳದಲ್ಲಿ ಬೆಳೆ ರಸ್ತೆಗೆ ಸುರಿದು ರೈತರ ಆಕ್ರೋಶ - Koppal APMC news

ಟೊಮ್ಯಾಟೋ ದರ ಕುಸಿತವಾಗಿದೆ ಎಂದು ಆಕ್ರೋಶಗೊಂಡ ರೈತರು ಎಪಿಎಂಸಿ ಮಾರುಕಟ್ಟೆಗೆ ತಂದಿದ್ದ ಬೆಳೆಯನ್ನು ರಸ್ತೆಗೆ ಸುರಿದಿದ್ದಾರೆ.

koppal
ಟೊಮ್ಯಾಟೋ ಬೆಳೆಯನ್ನು ರಸ್ತೆಗೆ ಸುರಿದ ರೈತರು

By

Published : Aug 16, 2021, 11:51 AM IST

ಕೊಪ್ಪಳ: ಟೊಮ್ಯಾಟೋ ದರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಬೆಳವನಾಳ ಗ್ರಾಮದ ಬಳಿಯ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೊಮ್ಯಾಟೋ ಬೆಳೆಯನ್ನು ರಸ್ತೆಗೆ ಸುರಿದ ರೈತರು

ಟೊಮ್ಯಾಟೋ ದರ ತೀವ್ರ ಕುಸಿತ ಕಂಡಿದೆ. 30 ಕೆಜಿ ತೂಕದ ಟೊಮ್ಯಾಟೋ ಹಣ್ಣಿನ ಒಂದು ಟ್ರೇಗೆ ಕೇವಲ 10 ರೂ. ನಿಗದಿಯಾಗಿದೆ. ಗ್ರಾಮೀಣ ಭಾಗದಿಂದ ಮಾರುಕಟ್ಟೆಗೆ ಒಂದು ಟೊಮ್ಯಾಟೋ ಟ್ರೇ ಬಾಡಿಗೆ 10 ರೂ.ಗಿಂತಲೂ ಹೆಚ್ಚಿಗೆ ಇದೆ. ಸಾಗಾಟದ ಖರ್ಚು, ಕಟಾವು ಮಾಡಲು ಬರುವ ಜನರ ಕೂಲಿ ಸೇರಿ ಅಧಿಕ ಖರ್ಚಾಗುತ್ತದೆ.

ಹೀಗಾಗಿ, ದರ ಕುಸಿತದಿಂದ ಬೇಸರಗೊಂಡ ರೈತರು ತಾವು ತಂದಿದ್ದ ನೂರಾರು ಬುಟ್ಟಿ ಟೊಮ್ಯಾಟೋ ಬೆಳೆಯನ್ನು ರಸ್ತೆಗೆ ಸುರಿದಿದ್ದಾರೆ.

ABOUT THE AUTHOR

...view details