ಕರ್ನಾಟಕ

karnataka

ETV Bharat / state

ರೈತ ದಿನಾಚರಣೆ ಮಾಜಿ ಸಿಎಂ ಟ್ವೀಟ್​: ಗಂಗಾವತಿಯಲ್ಲಿ ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ - ರೈತ ದಿನಾಚರಣೆಗೆ ಹೆಚ್​ಡಿ ಕುಮಾರಸ್ವಾಮಿ ಶುಭಾಶಯ ಸುದ್ದಿ

ರೈತರ ದಿನಾಚರಣೆ ಅಂಗವಾಗಿ ಗಂಗಾವತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಪ್ರಗತಿಪರ ಕೃಷಿಕರಿಗೆ ಸನ್ಮಾನ ಮಾಡಲಾಯ್ತು.

day
ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ

By

Published : Dec 23, 2019, 4:20 PM IST

ಗಂಗಾವತಿ/ಕೊಪ್ಪಳ:ನಗರದ ಹೊರವಲಯದಲ್ಲಿರುವ ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ರೈತ ದಿನಾಚರಣೆ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯ್ತು.

ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ಪ್ರಗತಿಪರ ರೈತರನ್ನು ಸನ್ಮಾನಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ, ಮಾರುಕಟ್ಟೆ ಸಿಗದೇ ತೊಂದರೆಯಲ್ಲಿದ್ದಾರೆ. ಅವರು ಎಂದಿಗೂ ಬಡವರಾಗಲು ಸಾಧ್ಯವಿಲ್ಲ. ಇಡೀ ದೇಶಕ್ಕೆ ಅನ್ನವಿಟ್ಟು ಸಲಹುವ ರೈತರು ದೇಶದ ನಾಡಿಮಿಡಿತ ಎಂದರು.ಇದೇ ಸಂದರ್ಭದಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಮುಖರಾದ ದೊಡ್ಡಪ್ಪ ದೇಸಾಯಿ, ಮರಿಯಪ್ಪ ಸಾಲೋಣಿ, ಸಿದ್ದರಾಮಯ್ಯಸ್ವಾಮಿ, ಪ್ರಭಾಕರ ವಕೀಲ, ಯಂಕಪ್ಪ ಕಟ್ಟಿಮನಿ ಹಾಜರಿದ್ರು.

ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್​​:

ಇನ್ನು ನಾಡಿನ‌ ಸಮಸ್ತ ಅನ್ನದಾತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಶುಭಾಶಯ ಕೋರಿದ್ದಾರೆ.

ರೈತ ಸುರಿಸುವ ಬೆವರಿಗೆ ಸರಿಸಮಾನವಾದ ಗೌರವ ಹಾಗೂ ಪ್ರತಿಫಲಗಳು ದೊರಕುವಂತಹ ದಿನಗಳು ಬಂದಾಗಲೇ ಈ ರೈತ ದಿನಾಚರಣೆ ಸಾರ್ಥಕವಾಗಲಿದೆ. ಇದರೊಂದಿಗೆ ರೈತರ ವಿಶ್ರಾಂತ ‌ಬದುಕಿಗೂ ರೂಪುರೇಷೆಗಳನ್ನು ಸರ್ಕಾರ ಯೋಜಿಸಬೇಕಾದ ಅಗತ್ಯವಿದೆ ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details