ಕೊಪ್ಪಳ:ಹೂವಿನ ವ್ಯಾಪಾರ ಕುಂಠಿತವಾದ ಹಿನ್ನೆಲೆಯಲ್ಲಿ ಮನನೊಂದ ರೈತನೊಬ್ಬ ಎರಡು ಎಕರೆ ಪ್ರದೇಶದಲ್ಲಿನ ಹೂವಿನ ಬೆಳೆಯನ್ನು ನಾಶಪಡಿಸಿದ್ದಾನೆ.
ಹೂವಿನ ವ್ಯಾಪಾರ ಕುಸಿತ: ಬೆಳೆ ನಾಶಪಡಿಸಿದ ರೈತ - ಕೊಪ್ಪಳ ಸುದ್ದಿ
ಒಂದು ತಿಂಗಳಿನಿಂದ ಹೂವನ್ನು ಯಾರೂ ಖರೀದಿಸುತ್ತಿಲ್ಲ. ಸಾಲಸೂಲ ಮಾಡಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಹೂವು ಬೆಳೆಯಲಾಗಿದ್ದರೂ ಯಾರೂ ಹೂ ಖರೀದಿಸುತ್ತಿಲ್ಲ ಎಂದು ರೈತನೋರ್ವ ಬೆಳೆ ನಾಶಪಡಿಸಿದ ಘಟನೆ ನಡೆದಿದೆ.
![ಹೂವಿನ ವ್ಯಾಪಾರ ಕುಸಿತ: ಬೆಳೆ ನಾಶಪಡಿಸಿದ ರೈತ Koppal](https://etvbharatimages.akamaized.net/etvbharat/prod-images/768-512-11940130-thumbnail-3x2-bng.jpg)
ಕೊಪ್ಪಳ ತಾಲೂಕಿನ ಲಿಂಗದಳ್ಳಿ ಗ್ರಾಮದ ದೇವರಾಜ ಮೇಟಿ ಎಂಬ ರೈತ ಹೂವಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ದೇವರಾಜ ಮೇಟಿ ಎರಡು ಎಕರೆ ಪ್ರದೇಶದಲ್ಲಿ ಗಲಾಟೆ ಹೂ, ಚೆಂಡು ಹೂ ಹಾಗೆ ಸುಗಂಧರಾಜ ಹೂವನ್ನು ಬೆಳೆದಿದ್ದರು. ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದ ಹಲವು ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ.
ಕಳೆದ ಒಂದು ತಿಂಗಳಿನಿಂದ ಹೂವನ್ನು ಯಾರೂ ಖರೀದಿಸುತ್ತಿಲ್ಲ. ಸಾಲಸೂಲ ಮಾಡಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಹೂವು ಬೆಳೆಯಲಾಗಿದೆ. ಆದರೆ ಹೂವು ಖರೀದಿಸಲು ಯಾರೂ ಬರುತ್ತಿಲ್ಲ. ಹೀಗಾಗಿ ಮನನೊಂದು ಬೆಳೆಯನ್ನು ನಾಶಪಡಿಸಿದ್ದೇನೆ ಎಂದು ರೈತ ದೇವರಾಜ ಮೇಟಿ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.