ಕೊಪ್ಪಳ:ವಿದ್ಯುತ್ ಸ್ಪರ್ಶಿಸಿದ ಪರಿಣಾಮ ರೈತನೊಬ್ಬ ಸ್ಥಳದಲ್ಲಿಯೇ ಅಸುನೀಗಿದ ಘಟನೆ ತಾಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು - ಕೊಪ್ಪಳ ಕ್ರೈಂ ನ್ಯೂಸ್
ವಿದ್ಯುತ್ ಸ್ಪರ್ಶಿಸಿ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಯಂಕಪ್ಪ ಈಳಿಗೇರ ಎಂಬ ರೈತ ಸಾವನ್ನಪ್ಪಿದ್ದಾನೆ.
ಮೃತ ರೈತ
ಮೃತ ರೈತನನ್ನು ಯಂಕಪ್ಪ ಈಳಿಗೇರ (55) ಎಂದು ಗುರುತಿಸಲಾಗಿದೆ. ತಮ್ಮ ಜಮೀನಿನಲ್ಲಿನ ಬೆಳೆಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ರೈತ ಮೃತಪಟ್ಟಿದ್ದಾನೆ. ಇನ್ನು ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.