ಕುಷ್ಟಗಿ (ಕೊಪ್ಪಳ):ಎರಡನೇ ಶನಿವಾರ ಸರ್ಕಾರಿ ರಜೆ ದಿನವಾಗಿದ್ದರೂ, ಇಲ್ಲಿನ ರೈತ ಸಂಪರ್ಕ ಕೇಂದ್ರ ರೈತರ ಒತ್ತಾಯಕ್ಕೆ ಮಣಿದು ಬಿತ್ತನೆ ಬೀಜ ಪೂರೈಕೆ ಮಾಡಿದೆ.
ರೈತರಿಗೆ ಎರಡನೇ ಶನಿವಾರ ಸರ್ಕಾರಿ ರಜೆ ಎಂಬ ಅರಿವಿಲ್ಲದೇ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದರು. ಆ ವೇಳೆ ರಜೆ ಇರುವುದು ಗೊತ್ತಾಗಿ ಮಾರನೆ ದಿನ ರಜೆ ಇರುವುದರಿಂದ ಸೋಮವಾರ ಪುನಃ ಬರಬೇಕೆಂಬ ಚಿಂತೆಯಲ್ಲಿದ್ದರು. ಈ ವೇಳೆ ಕೆಲ ರೈತರು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್, ತಾಂತ್ರಿಕ ಸಹಾಯಕ ನಾಗನಗೌಡ ಪಾಟೀಲ ಅವರನ್ನು ಸಂಪರ್ಕಿಸಿ ನಿಜ ಸ್ಥಿತಿ ವಿವರಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಬಿತ್ತನೆ ಬೀಜ ವಿತರಣೆಗೆ ಮುಂದಾದರು.