ಕರ್ನಾಟಕ

karnataka

ETV Bharat / state

ಕೊಪ್ಪಳ: ಭೀಕರ ಬರ, ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ

Farmer committed suicide: ಸೋಮವಾರ ರಾತ್ರಿ ಹೊಲದಲ್ಲಿ ರೈತ ಮಹೇಶ ಕುದ್ರಿಕಟಿಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Farmer Committed Suicide
ಆತ್ಮಹತ್ಯೆ ಮಾಡಿಕೊಂಡ ರೈತ

By ETV Bharat Karnataka Team

Published : Dec 12, 2023, 2:01 PM IST

Updated : Dec 12, 2023, 4:17 PM IST

ರೈತನ ಆತ್ಮಹತ್ಯೆ ಕುರಿತು ಸಂಬಂಧಿಯಿಂದ ಮಾಹಿತಿ

ಕೊಪ್ಪಳ: ಸತತ ಬರದ ಹಿನ್ನೆಲೆಯಲ್ಲಿ ವಿವಿಧೆಡೆ ಸಾಲ ಮಾಡಿಕೊಂಡಿದ್ದ ರೈತನೋರ್ವ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ರೈತ ಮಹೇಶ ಕುದ್ರಿಕಟಿಗಿ (37)ಮೃತ ರೈತ. ಮೃತನಿಗೆ ಪತ್ನಿ, ಮೂವರು ಮಕ್ಕಳು, ಸಹೋದರ ಹಾಗೂ ತಾಯಿ ಇದ್ದು, ಖಾಸಗಿ ಬ್ಯಾಂಕ್ ಸೇರಿ ವಿವಿಧೆಡೆ ಕೈಸಾಲ ಮಾಡಿಕೊಂಡಿದ್ದ.

ಸಕಾಲಕ್ಕೆ ಮಳೆಯಾಗದಿರುವುದು ಹಾಗೂ ನೀರಾವರಿ ಆಶ್ರಿತ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೆ ಮಾಡಿದ ಸಾಲ ಮರಳಿ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದ. ಇದರಿಂದ ಮನನೊಂದು ಸೋಮವಾರ ರಾತ್ರಿ ಹೊಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗ ನೀಡದ್ದಕ್ಕೆ ಯುವ ರೈತ ಆತ್ಮಹತ್ಯೆ: ಕೈಗಾರಿಕೆ ಪ್ರಾರಂಭಿಸಲು ತಮ್ಮಿಂದ ಜಮೀನು ಪಡೆದು, ನಂತರ ಪ್ರತಿಯಾಗಿ ಸಂಸ್ಥೆ ಯಾವುದೇ ಉದ್ಯೋಗ ನೀಡದೇ ಇರುವುದಕ್ಕೆ ಬೇಸರಗೊಂಡು ಯುವ ರೈತನೋರ್ವ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ತಿಂಗಳು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಯುವ ರೈತ ಸಿದ್ದರಾಜು ಎನ್ನವವರು ಆತ್ಮಹತ್ಯೆ ಮಾಡಿಕೊಂಡವರು.

ಕೆಐಎಡಿಬಿ ವತಿಯಿಂದ ಕೈಗಾರೀಕರಣಕ್ಕೆಂದು ರೈತರ ಜಮೀನುಗಳನ್ನು ತೆಗೆದುಕೊಂಡು ಅಡಕನಹಳ್ಳಿ, ತಾಂಡ್ಯ, ಕಡಕೋಲ, ತಾಂಡವಪುರ ಹಾಗೂ ಹಿಮಾವು ಗ್ರಾಮಗಳನ್ನು ಸೇರಿದಂತೆ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲಾಗಿದೆ. ಜಮೀನು ಪಡೆಯುವಾಗ, ಆ ಭೂಮಿಯ ರೈತರ ಮಕ್ಕಳಿಗೆ ಅವರ ವಿದ್ಯೆಗೆ ತಕ್ಕಂತೆ ಕೆಲಸ ಕೊಡಬೇಕು ಎನ್ನುವುದಾಗಿತ್ತು. ಆದರೆ ಭೂಮಿ ಪಡೆದುಕೊಂಡ ರೈತರ ಮಕ್ಕಳಿಗೆ ಯಾವುದೇ ಉದ್ಯೋಗ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಕೆಐಎಡಿಬಿ ಅಧಿಕಾರಿಗಳು ರೈತರ ಮಕ್ಕಳಿಗ3ಎ ಉದ್ಯೋಗ ಕೊಡುವಂತೆ ಆದೇಶ ಮಾಡಿದರೂ, ಖಾಸಗಿ ಸಂಸ್ಥೆಯ ಆಡಳಿತ ಮಂಡಳಿ ಮಾತ್ರ ಖಾಯಂ ಕೆಲಸ ಕೊಡುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗ ಸಿಗದೇ ಪತಿ ನೊಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ರೈತನ ಪತ್ನಿ ದೂರಿನಲ್ಲಿ ಆರೋಪಿಸಿದ್ದರು.

ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಸಿದ್ದರಾಜು, ಡೆತ್​ನೋಟ್​ನಲ್ಲಿ "ನನ್ನ ಜಮೀನನ್ನು ಕೈಗಾರೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ ಕೆಲಸ ಮಾತ್ರ ನೀಡಿಲ್ಲ. ಕೆಲಸಕ್ಕಾಗಿ ಅಲೆದು ಅಲೆದು ಸಾಕಾಗಿ ಹೋಯಿತು. ನನ್ನ ಹಾಗೂ ನನ್ನ ಕುಟುಂಬಸ್ಥರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದ್ದಾರೆ ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಬರೆದಿಟ್ಟಿದ್ದರು.

ಇದನ್ನೂ ಓದಿ:ಕೊಡಗು : ಹೋಂಸ್ಟೇನಲ್ಲಿ ಕೇರಳ ಮೂಲದ ದಂಪತಿ ಮಗು ಸಮೇತ ಆತ್ಮಹತ್ಯೆ

Last Updated : Dec 12, 2023, 4:17 PM IST

ABOUT THE AUTHOR

...view details