ಕರ್ನಾಟಕ

karnataka

ETV Bharat / state

ಅವಧಿಗೂ ಮುನ್ನವೇ ತೆನೆಯೊಡೆದ ಭತ್ತದ ಪೈರು: ಕಾರಣ ತಿಳಿಸುವಂತೆ ಅಧಿಕಾರಿಗಳಿಗೆ ರೈತರ ಮನವಿ - ಗಂಗಾವತಿ ಸುದ್ದಿ

ಗಂಗಾವತಿಯಲ್ಲಿ ಅವಧಿಗೂ ಮುನ್ನವೇ ತೆನೆಯೊಡೆದು ಜೊಳ್ಳು ಕಟ್ಟುತ್ತಿರುವ ಭತ್ತದ ಬಗ್ಗೆ ಸಂಶೋಧನೆ ನಡೆಸಿ ತಕ್ಷಣ ವರದಿ ನೀಡಬೇಕೆಂದು ಜಂಗಮ ಕಲ್ಗುಡಿ ಹಾಗೂ ಮರಳಿ ಭಾಗದ ರೈತರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

farmer-approach-to-agriculture-officers-
ಅವಧಿಗೂ ಮುನ್ನವೇ ತೆನೆಯೊಡೆದ ಪೈರು

By

Published : Feb 26, 2020, 7:50 PM IST

ಗಂಗಾವತಿ: ಅವಧಿಗೂ ಮುನ್ನವೇ ತೆನೆಯೊಡೆದು ಜೊಳ್ಳು ಕಟ್ಟುತ್ತಿರುವ ಭತ್ತದ ಬಗ್ಗೆ ಸಂಶೋಧನೆ ನಡೆಸಿ ತಕ್ಷಣ ವರದಿ ನೀಡಬೇಕೆಂದು ಜಂಗಮ ಕಲ್ಗುಡಿ ಹಾಗೂ ಮರಳಿ ಭಾಗದ ರೈತರು ಕೃಷಿ ವಿಶ್ವ ವಿದ್ಯಾಲಯದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕೇವಲ ಒಂದೂವರೆ ತಿಂಗಳ ಭತ್ತದ ಸಸಿ ತೆನೆ ಕಟ್ಟುತ್ತಿರುವುದಕ್ಕೆ ಆತಂಕಗೊಂಡಿರುವ ರೈತರು, ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳನ್ನು ತಡೆದು ಸೂಕ್ತ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಅವಧಿಗೂ ಮುನ್ನವೇ ತೆನೆಯೊಡೆದ ಭತ್ತದ ಪೈರು... ಕಂಗಾಲಾದ ರೈತರು

ಫೆ.28ರಂದು ಗಂಗಾವತಿಗೆ ಕೃಷಿ ಸಚಿವರು ಬರಲಿದ್ದಾರೆ. ಅಷ್ಟರೊಳಗೆ ವರದಿ ನೀಡಿದರೆ ಸಚಿವರ ಮೂಲಕ ಸರ್ಕಾರಕ್ಕೆ ಒತ್ತಡ ಹೇರಿ ಪರಿಹಾರಕ್ಕೆ ಯತ್ನಿಸುತ್ತೇವೆ. ಹಾಗಾಗಿ ಆದಷ್ಟು ಶೀಘ್ರವಾಗಿ ಮಾಹಿತಿ ನೀಡಿ ಎಂದು ಕೇಳಿಕೊಂಡರು.

ABOUT THE AUTHOR

...view details