ಕರ್ನಾಟಕ

karnataka

By

Published : Feb 22, 2021, 4:25 PM IST

ETV Bharat / state

ಮಾರುಕಟ್ಟೆಯಲ್ಲಿ ಹುಣಸೆ ಬೆಲೆ ಡಿಢೀರ್ ಕುಸಿತ: ಬೆಳೆಗಾರರಿಗೆ ಹುಳಿ ಹಿಂಡಿದ ಹುಣಸೆ

ಮಾರುಕಟ್ಟೆಯಲ್ಲಿ ಹುಣಸೆ ಬೆಲೆ ಡಿಢೀರ್ ಕುಸಿತಗೊಂಡಿದ್ದು, ಪ್ರತಿ ಕ್ವಿಂಟಾಲ್​ಗೆ 6 ಸಾವಿರ ರೂ. ಇದ್ದ ಹುಣಸೆ ಬೆಲೆ ಇದ್ದಕ್ಕಿದ್ದಂತೆ ವಾರದಿಂದ ವಾರಕ್ಕೆ 500 ರೂ. ದಿಂದ 1ಸಾವಿರ ರೂ.ಗೆ ಕುಸಿತ ಕಂಡಿದೆ.

Fall of tamarind prices in market
ರೈತ

ಕುಷ್ಟಗಿ: ಮಾರುಕಟ್ಟೆಯಲ್ಲಿ ಹುಣೆಸೆ ಹಣ್ಣಿನ ಬೆಲೆ ದಿಢೀರ್​ ಕುಸಿತಗೊಂಡಿದ್ದು, ಹುಣಸೆ ಬೆಳಗಾರರು ಕಂಗಾಲಾಗಿದ್ದಾರೆ.

ಕಳೆದ ವರ್ಷ ಹುಣಸೆ ಉತ್ಪನ್ನ ಕಡಿಮೆ ಇತ್ತು. ಆದರೆ‌ ಮಾರುಕಟ್ಟೆಯಲ್ಲಿ ಬೆಲೆ ಪ್ರತಿ ಕ್ವಿಂಟಲ್ ಗೆ 8ರಿಂದ 10 ಸಾವಿರ ರೂ. ಇತ್ತು. ಆದರೀಗ ಬಾರಿ ಉತ್ತಮ ಮಳೆಯಿಂದಾಗಿ ಹುಣಸೆ ಹಣ್ಣಿನ ಉತ್ಪನ್ನ ಹೆಚ್ಚಿದ್ದು, ಆರಂಭದಲ್ಲಿ ಪ್ರತಿ ಕ್ವಿಂಟಲ್ ಗೆ 6 ಸಾವಿರ ರೂ. ಗೆ ಮಾರಾಟವಾಗುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ವಾರದಿಂದ ವಾರಕ್ಕೆ 500 ರೂ. ದಿಂದ 1ಸಾವಿರ ರೂ.ಗೆ ಕುಸಿತ ಕಂಡಿದ್ದು, ಉತ್ತಮ ಫಸಲಿದ್ದರೂ ಬೆಳೆಗಾರರನ್ನು ನಿರಾಸೆಯಾಗಿಸಿದೆ.

ಮಾರುಕಟ್ಟೆಯಲ್ಲಿ ಹುಣಸೆ ಬೆಲೆ ಡಿಢೀರ್ ಕುಸಿತ

ಕುಷ್ಟಗಿ ಮಾರುಕಟ್ಟೆಗೆ ಇನ್ನೂ ಎರಡು ವಾರದ ಉತ್ಪನ್ನ ಬರುವ ಸಾಧ್ಯತೆ ಇದ್ದು, ಬೆಲೆ ಮತ್ತಷ್ಟು ಕುಸಿತದ ಬಗ್ಗೆ ಆತಂಕ ಬೆಳೆಗಾರರಿಗೆ ಹಾಗೂ ಮಾರಾಟಗಾರರಲ್ಲಿ ವ್ಯಕ್ತವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸ್ಥಳೀಯ ಕೋಲ್ಡ್ ಸ್ಟೋರೇಜ್​​ನಲ್ಲಿಸಿದ್ದರೆ ಅದಕ್ಕೆ ಬಾಡಿಗೆ ಕಟ್ಟುವಷ್ಟು ಹಣ ರೈತರ ಬಳಿ ಇಲ್ಲ.

ಹುಣಸೆಗಿಡಗಳನ್ನು ರೈತರಿಂದ ಗುತ್ತಿಗೆ ತೆಗೆದುಕೊಂಡಿರುವ ಭಜಂತ್ರಿ ಸಮುದಾಯದವರು, ಹುಣಸೆ ಮರಗಳಲ್ಲಿ ಹಣ್ಣನ್ನು ಉದುರಿಸಿ, ಕುಟ್ಟಿ ನಾರು ತೆಗೆದು ಮಾರುಕಟ್ಟೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ. ಹುಣಸೆ ಮರಗಳನ್ನು ಉದುರಿಸುವುದು ಕಷ್ಟಕರ ಕೆಲಸವಾಗಿದ್ದು, ಪ್ರತಿ ಗಿಡಕ್ಕೆ 600 ರೂ. ದಿಂದ 650 ರೂ. ನಿತ್ಯದ ಕೂಲಿ. ಹುಣಸೆ ಹಣ್ಣು ಆರಿಸುವ ಮಹಿಳೆಯರಿಗೆ ಅದನ್ನು ತಂದು ಬೀಜ ಬೇರ್ಪಡಿಸಿ, ನಾರು ತೆಗೆಯುವವರಿಗೆ 200 ರಿಂದ 250 ರೂ. ಕೂಲಿ ಇದೆ. ಇನ್ನೂ ಮಾರುಕಟ್ಟೆಗೆ ಸಾಗಿಸುವುದು ಸಾಗಣೆ ಖರ್ಚು, ಕುಷ್ಟಗಿ ಮಾರುಕಟ್ಟೆಯಲ್ಲಿ ಜಾಗದ ಬಾಡಿಗೆ ಇತ್ಯಾದಿ ಖರ್ಚುಗಳ ಪಟ್ಟಿ ಬೆಳೆಯುತ್ತದೆ. ಈ ಪರಿಸ್ಥಿತಿಯಲ್ಲಿ ಗಿಡದಲ್ಲಿ ಹುಣಸೆ ಉತ್ಪನ್ನ ಉದುರಿಸಿದ ಖರ್ಚು ಸಹ ರೈತರಿಗೆ ಕೈಗೆಟುಕದಂತಾಗಿದೆ.

ಎಪಿಎಂಸಿಯಿಂದ ಹುಣಸೆ ಹೊರಗೆ: ಹುಣಸೆ ಹಣ್ಣು ಎಪಿಎಂಸಿ ವ್ಯಾಪ್ತಿಯಲ್ಲಿ ಇಲ್ಲ ಹೀಗಾಗಿ ಇಲ್ಲಿನ ಹಳೆ ಪ್ರವಾಸಿ ಮಂದಿರದ ಬಳಿ ಪ್ರತ್ಯೇಕ ಮಾರುಕಟ್ಟೆ ಪ್ರತಿ ವರ್ಷವೂ ನಡೆಯುತ್ತಿದ್ದು, ರೈತರಿಗೆ ನಿರ್ಧರಿತ ಬೆಲೆ ಇಲ್ಲ. ಇಲ್ಲಿ ಮದ್ಯವರ್ತಿಗಳು ನಿರ್ಣಯಿಸಿದ ಬೆಲೆಗೆ ಹುಣಸೆ ಹಣ್ಣುಗಳ ಗಂಟು ಮಾರಾಟ ಮಾಡುವ ವ್ಯವಸ್ಥೆ ಇದ್ದು ಬೆಳೆಗಾರರಿಗೆ ನ್ಯಾಯಯುತ ಬಲೆ ಸಿಗೋದು ಕಡಿಮೆ ಎನ್ನಲಾಗುತ್ತಿದೆ.

ABOUT THE AUTHOR

...view details