ಗಂಗಾವತಿ:ಪ್ರಮುಖ ಧಾರ್ಮಿಕ ಕೇಂದ್ರ ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲ, ಕಳೆದ ಕೆಲ ತಿಂಗಳಿಂದ ಆದಾಯದ ಮೂಲಕ ಹೆಚ್ಚು ಸದ್ದು ಮಾಡಿತ್ತು. ದೇಗುಲಕ್ಕೆ ಮಾಸಿಕ ಸರಾಸರಿ 09 ರಿಂದ 10 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗುತಿತ್ತು. ಆದರೆ ಕಳೆದ 13 ತಿಂಗಳಲ್ಲಿ ಇದೇ ಮೊದಲಿಗೆ ಅತ್ಯಂತ ಕಡಿಮೆ ಆದಾಯ ಸಂಗ್ರಹವಾಗಿದೆ.
ದಿಢೀರ್ ಕುಸಿದ ಅಂಜನಾದ್ರಿ ಆಂಜನೇಯನ ಆದಾಯ: ಮಾರುತಿ ಬಡವನಾಗಲು ಕಾರಣ..? - ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲ
ಪ್ರಮುಖ ಧಾರ್ಮಿಕ ಕೇಂದ್ರ ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲ, ಕಳೆದ ಕೆಲ ತಿಂಗಳಿಂದ ಆದಾಯದ ಮೂಲಕ ಹೆಚ್ಚು ಸದ್ದು ಮಾಡಿತ್ತು. ಆದರೆ ಕಳೆದ 13 ತಿಂಗಳಲ್ಲಿ ಇದೇ ಮೊದಲಿಗೆ ಅತ್ಯಂತ ಕಡಿಮೆ ಆದಾಯ ಸಂಗ್ರವಾಗಿದೆ.
ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲ
ಕಳೆದ ತಿಂಗಳು 10.53 ಲಕ್ಷ ರೂಪಾಯಿ ಹಣ ಸಂಗ್ರಹವಾಗಿತ್ತು. ಆದರೆ ಫೆಬ್ರವರಿ ತಿಂಗಳಲ್ಲಿ ಕೇವಲ 6.51 ಲಕ್ಷ ಮಾತ್ರ ಸಂಗ್ರಹವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ದಿಢೀರ್ ಆದಾಯ ಕುಸಿಯಲು ವಿರುಪಾಪುರ ಗಡ್ಡೆಯಲ್ಲಿನ ವಿದೇಶಿಗರ ತಾಣ ಎತ್ತಂಗಡಿ, ಪ್ರವಾಸಿಗರ ಸಂಖ್ಯೆ ಕುಸಿತ, ಕಳೆದ ತಿಂಗಳಲ್ಲಿ ಯಾವುದೇ ವಿಶೇಷ ದಿನಗಳು ಇಲ್ಲದಿರುವುದು ಹಾಗೆಯೇ ಬೇಸಿಗೆ ಆರಂಭ ಸೇರಿದಂತೆ ಹಲವಾರು ಅಂಶಗಳು ಕಾರಣ ಎನ್ನಲಾಗುತ್ತಿದೆ.