ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ಸರ್ಕಾರಿ ಜಡ್ಡು ಎನ್ನುವಂತಾಗಿದೆ.. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ - latest corona virus news

ಜನರು ಕೊರೊನಾ ಭ್ರಮೆಯಿಂದ ಹೊರಬರಲು ಲಾಕ್‌ಡೌನ್ ಸಡಿಲಿಸಿರಬಹುದು. ಸರ್ಕಾರವು ವಾಸ್ತವ ಸ್ಥಿತಿ ಪರಿಶೀಲಿಸಿ ಲಾಕ್‌ಡೌನ್ ಸಡಿಲಿಸಿದೆ. ಆದರೀಗ ಲಾಕ್‌ಡೌನ್ ಪೂರ್ಣ ಸಡಿಲಿಕೆ ಸದ್ಯಕ್ಕೆ ಸೂಕ್ತವಲ್ಲವೇನೋ ಎಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದರು.

ex-mla-doddanagowda
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

By

Published : May 31, 2020, 10:14 PM IST

ಕುಷ್ಟಗಿ :ಕೊರೊನಾ ವೈರಸ್ ಸರ್ಕಾರಿ ಜಡ್ಡು ಎನ್ನುವಂತಾಗಿದೆ. ಜನತೆ ಈ ಮನೋಸ್ಥಿತಿಯಿಂದ ಹೊರಬರಬೇಕಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಕುಷ್ಟಗಿ ತಾಲೂಕಿನ ಕೊರಡಕೇರಾದ ಫಾರ್ಮಹೌಸ್​ನಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನರು ಕೊರೊನಾ ಭ್ರಮೆಯಿಂದ ಹೊರಬರಲು ಲಾಕ್‌ಡೌನ್ ಸಡಿಲಿಸಿರಬಹುದು. ಸರ್ಕಾರವು ವಾಸ್ತವ ಸ್ಥಿತಿ ಪರಿಶೀಲಿಸಿ ಲಾಕ್‌ಡೌನ್ ಸಡಿಲಿಸಿದೆ. ಆದರೀಗ ಲಾಕ್‌ಡೌನ್ ಪೂರ್ಣ ಸಡಿಲಿಕೆ ಸದ್ಯಕ್ಕೆ ಸೂಕ್ತವಲ್ಲವೇನೋ ಎಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದರು.

ಕೊರೊನಾ ಸಂಧರ್ಭದಲ್ಲಿ ಪಕ್ಷ ಸುಮ್ಮನೇ ಕುಳಿತಿಲ್ಲ. ಕಾರ್ಯಕರ್ತರ ನಿರ್ವಹಣೆಯನ್ನು ಪಕ್ಷ ಗಮನಿಸುತ್ತಿದೆ. ಸಂಘಟನೆಯ ವೇಗಕ್ಕೆ ಕೊರೊನಾ ಅಡ್ಡಿಯಾಗಿದೆ. ಈಗಿನ ಬೆಳವಣಿಗೆಯಲ್ಲಿ ಬಿಜೆಪಿ ಯಾವೂದೇ ಭಿನ್ನಾಭಿಪ್ರಾಯ ಸ್ಫೋಟದ ಮಾತೇ ಇಲ್ಲ. ಬಿಜೆಪಿ ಹೈಕಮಾಂಡ್ ಬಿಗಿಯಾಗಿದ್ದು, ಪಕ್ಷಕ್ಕೆ ಎಲ್ಲರೂ ನಿಷ್ಠೆಯಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಭಿನ್ನಾಭಿಪ್ರಾಯ ಚಟುವಟಿಕೆಗಳು ನಡೆಯುವುದಿಲ್ಲ ಎಂದರು.

ಉಮೇಶ್​ ಕತ್ತಿ ಅವರು ಆಪ್ತರನ್ನು ಊಟಕ್ಕೆ ಸೇರಿಸಿದ್ದಾರೆಯೇ ಹೊರತು ಭಿನ್ನಾಭಿಪ್ರಾಯ ಚಟುವಟಿಕೆಗಳಿಗೆ ಅಲ್ಲ. ಅವರು ಸಹ ಭಿನ್ನಾಭಿಪ್ರಾಯಕ್ಕೆ ಕುಮ್ಮಕ್ಕು ನೀಡುವವರಲ್ಲ ಎನ್ನುವ ಭಾವನೆ ನನ್ನದಾಗಿದೆ ಎಂದರು.

ABOUT THE AUTHOR

...view details