ಕೊಪ್ಪಳ:ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ದೊಡ್ಡ ಬಿರುಕು ಇದೆ. ಲೋಕಸಭಾ ಚುನಾವಣೆ ಬಳಿಕ ಅದು ಹೊರಬೀಳಲಿದೆ. ಇದರಿಂದಾಗಿ ರಾಜ್ಯ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲಿದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕೈ-ತೆನೆ ನಡುವೆ ದೊಡ್ಡ ಬಿರುಕಿದೆ, ಎಲೆಕ್ಷನ್ ಬಳಿಕ ಸರ್ಕಾರ ಬೀಳುತ್ತೆ- ಲಕ್ಷ್ಮಣ ಸವದಿ ಭವಿಷ್ಯ
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲಿದೆ. ನಾವೇನು ಆಪರೇಷನ್ ಕಮಲ ಮಾಡುವುದಿಲ್ಲ. ಆದರೆ, ಅವರಲ್ಲಿ ಉಂಟಾಗುವ ಒಡಕಿನಿಂದಾಗಿ ತನ್ನಷ್ಟಕ್ಕೆ ತಾನೇ ರಾಜ್ಯ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲಿದೆ ಎಂದು ಲಕ್ಷ್ಮಣ ಸವದಿ ಭವಿಷ್ಯ ನುಡಿದಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಕಾಂಗ್ರೆಸ್ನವರನ್ನು ಜೆಡಿಎಸ್ನವರು, ಜೆಡಿಎಸ್ನವರನ್ನು ಕಾಂಗ್ರೆಸ್ನವರು ವಿರೋಧ ಮಾಡುತ್ತಿದ್ದಾರೆ. ಅವರ ಮಧ್ಯೆ ದೊಡ್ಡ ಬಿರುಕು ಇದೆ. ಈ ಬಿರುಕು ಲೋಕಸಭಾ ಚುನಾವಣೆಯ ಬಳಿಕ ಹೊರಬೀಳಲಿದೆ. ಇದು ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣವಾಗಲಿದೆ. ನಾವೇನು ಆಪರೇಷನ್ ಕಮಲ ಮಾಡುವುದಿಲ್ಲ. ಆದರೆ, ಅವರಲ್ಲಿ ಉಂಟಾಗುವ ಒಡಕಿನಿಂದಾಗಿ ತನ್ನಷ್ಟಕ್ಕೆ ತಾನೇ ರಾಜ್ಯ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲಿದೆ. ಸರ್ಕಾರ ಬಿದ್ದುಹೋದ ಬಳಿಕ ನಾವು ಮುಂದೆ ವಿಚಾರ ಮಾಡ್ತೀವಿ ಎಂದು ಹೇಳಿದರು. ಅಲ್ಲದೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಎರಡನೇ ಬಾರಿ ಎಂಪಿಯಾಗಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.