ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಮನ್ ಸೆನ್ಸ್ ಇರಬೇಕಿತ್ತು. ಅವರಿಂದಲೇ ಗಲಭೆಗಳು ಹೆಚ್ಚಾಗುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯ, ಹೆಚ್ಡಿಕೆಗೆ ಕಾಮನ್ ಸೆನ್ಸ್ ಇರಬೇಕಿತ್ತು: ಸಂಗಣ್ಣ ಕರಡಿ - incitement-to-riots-said-by-mp-sanganna
ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ಡಿಕೆ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೇಳಿಕೆ ನೀಡುವ ಮುನ್ನ ಕಾಮನ್ ಸೆನ್ಸ್ ಇರಬೇಕು ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದರು.

ಸಂಸದ ಕರಡಿ ಸಂಗಣ್ಣ
ಸಂಸದ ಕರಡಿ ಸಂಗಣ್ಣ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರ ಗಲಭೆ ಪ್ರಕರಣವನ್ನು ಈ ಇಬ್ಬರು ನಾಯಕರು ಬಿಜೆಪಿ ಸರ್ಕಾರದ ಮೇಲೆ ಎತ್ತುಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ಗಲಭೆಗೆ ಯಾರು ಕಾರಣವೆಂಬುದಕ್ಕೆ ಇಂದು ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇಬ್ಬರು ನಾಯಕರಿಗೆ ತಾವು ಏನು ಮಾತಾಡುತ್ತೇವೆ ಎಂಬುದು ಗೊತ್ತಿರಬೇಕು ಎಂದು ಕಿಡಿಕಾರಿದರು.
ಇಂತಹ ನಾಯಕರಿಂದಲೇ ದೇಶ ದುಸ್ಥಿತಿಗೆ ಬಂದಿದೆ. ಜನತೆ ಹಾಗೂ ಕಾಯ್ದೆ ಬಗ್ಗೆ ಈ ನಾಯಕರಿಗೆ ಕಾಳಜಿ ಇಲ್ಲ. ನಾವು ಮುಸ್ಲಿಂ ಸಮಾಜದ ವಿರೋಧಿಗಳಲ್ಲ ಎಂದು ಕೇಂದ್ರ ಸರ್ಕಾರದ ಮಸೂದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.