ಗಂಗಾವತಿ/ ಕೊಪ್ಪಳ: ಕೆಲಸ ಕಸಿದುಕೊಂಡ ಕೊರೊನಾದಂತ ತುರ್ತು ಸಂದರ್ಭದಲ್ಲೂ ಸರ್ಕಾರ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ್ದ ಮಹಿಳೆಯರ ಸಮಸ್ಯೆ ಬಗ್ಗೆ ಗುಪ್ತದಳದ ಸಿಬ್ಬಂದಿ ಮಾಹಿತಿ ಕಲೆ ಹಾಕಿದರು.
ಈಟಿವಿ ಭಾರತ್ ಫಲಶೃತಿ: ನೀಲಕಂಠೇಶ್ವರ ಕ್ಯಾಂಪ್ನ ಮಹಿಳೆಯರ ಸಮಸ್ಯೆ ಆಲಿಸಿದ ಸಿಬ್ಬಂದಿ - ಗುಪ್ತದಳದ ಸಿಬ್ಬಂದಿ
ಸರ್ಕಾರ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ್ದ ಮಹಿಳೆಯರ ಸಮಸ್ಯೆ ಬಗ್ಗೆ ಗುಪ್ತದಳದ ಸಿಬ್ಬಂದಿ ಮಾಹಿತಿ ಕಲೆ ಹಾಕಿದರು. ಈಟಿವಿ ಭಾರತದಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾದ ಹಿನ್ನೆಲೆ ಇಲ್ಲಿನ ನೀಲಕಂಠೇಶ್ವರ ಕ್ಯಾಂಪ್ಗೆ ಭೇಟಿ ನೀಡಿದ ಗುಪ್ತದಳದ ಸಿಬ್ಬಂದಿ, ಮಹಿಳೆಯರ ಸಮಸ್ಯೆ, ಸರ್ಕಾರ ಉಚಿತವಾಗಿ ನೀಡುವ ಹಾಲು ಏಕೆ ತಲುಪುತ್ತಿಲ್ಲ ಎಂಬ ಮೊದಲಾದ ಮಾಹಿತಿ ಸಂಗ್ರಹಿಸಿದರು.

ಈಟಿವಿ ಭಾರತ್ ಫಲಶೃತಿ: ನೀಲಕಂಠೇಶ್ವರ ಕ್ಯಾಂಪಿನ ಮಹಿಳೆಯರ ಸಮಸ್ಯೆ ಆಲಿಸಿದ ಸಿಬ್ಬಂದಿ
ಈಟಿವಿ ಭಾರತದಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾದ ಹಿನ್ನೆಲೆ ಇಲ್ಲಿನ ನೀಲಕಂಠೇಶ್ವರ ಕ್ಯಾಂಪಿಗೆ ಭೇಟಿ ನೀಡಿದ ಗುಪ್ತದಳದ ಸಿಬ್ಬಂದಿ, ಮಹಿಳೆಯರ ಸಮಸ್ಯೆ, ಸರ್ಕಾರ ಉಚಿತವಾಗಿ ನೀಡುವ ಹಾಲು ಏಕೆ ತಲುಪುತ್ತಿಲ್ಲ ಎಂಬ ಮೊದಲಾದ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಲ ಮಹಿಳೆಯರು, ನಿತ್ಯ ಮನೆಮನೆಗೆ ತೆರಳಿ ಕೂದಲು ಸಂಗ್ರಹಿಸುವುದು, ಪಿನ್ ಮಾರಾಟ ಮಾಡುವುದು, ಸಿಂಬಿ, ಪೊರಕೆ, ಪುಟ್ಟಿ, ನಿಲುವಿನಂತ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸಲಾಗುತಿತ್ತು. ಆದರೆ ಈಗ ಲಾಕ್ಡೌನ್ ಪರಿಣಾಮದಿಂದ ಮನೆಗೆ ತೆರಳಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.