ಕುಷ್ಟಗಿ (ಕೊಪ್ಪಳ):ಹಾಲಿನ ತಾಜಾತನ, ಗುಣಮಟ್ಟದ ಹಿನ್ನೆಲೆಯಲ್ಲಿ ಸಾಗಾಣಿಕಾ ಖರ್ಚು ಉಳಿಸಲು ಸಕಾಲಿಕ ಸೇವೆಗಾಗಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ 3 ಸಾವಿರ ಲೀಟರ್ ಸಾಮರ್ಥ್ಯದ ಇನ್ನೂ 5 ಬಿಎಂಸಿ (ಬಲ್ಕ ಮಿಲ್ಕ್ ಕೂಲರ್) ಸ್ಥಾಪಿಸಲು ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಉದ್ದೇಶಿಸಿದೆ.
ಹಾಲು ಸಾಗಾಣಿಕಾ ವೆಚ್ಚ ಕಡಿಮೆ ಮಾಡಲು ಕುಷ್ಟಗಿಯಲ್ಲಿ 5 ಮಿಲ್ಕ್ ಕೂಲರ್ ಸ್ಥಾಪನೆ - Hanumansagar BMC
ಕುಷ್ಟಗಿ ಪಟ್ಟಣದಲ್ಲಿ 20 ಸಾವಿರ ಲೀಟರ್ ಸಾಮರ್ಥ್ಯದ ಹಾಲು ಶೀತಲೀಕರಣ ಘಟಕವಿದೆ. ಈ ಘಟಕಕ್ಕೆ ತಾಲೂಕಿನ ಸಕ್ರೀಯ 61 ಹಾಲು ಉತ್ಪಾದಕರ ಸಂಘಗಳ ಮೂಲಕ ಹಾಲು ಸರಬರಾಜಿನಲ್ಲಿ ಸಾಗಾಣಿಕೆ ವೆಚ್ಚ, ಸಮಯದ ಉಳಿತಾಯದ ಜೊತೆಯಲ್ಲಿ ಹಾಲಿನ ತಾಜಾತನ ಉಳಿಸಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆ 3 ಸಾವಿರ ಲೀಟರ್ ಸಾಮರ್ಥ್ಯದ ಇನ್ನೂ 5 ಬಿಎಂಸಿ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ.
ಕುಷ್ಟಗಿ ಪಟ್ಟಣದಲ್ಲಿ 20 ಸಾವಿರ ಲೀಟರ್ ಸಾಮರ್ಥ್ಯದ ಹಾಲು ಶೀತಲೀಕರಣ ಘಟಕವಿದೆ. ಈ ಘಟಕಕ್ಕೆ ತಾಲೂಕಿನ ಸಕ್ರೀಯ 61 ಹಾಲು ಉತ್ಪಾದಕರ ಸಂಘಗಳ ಮೂಲಕ ಹಾಲು ಸರಬರಾಜಿನಲ್ಲಿ ಸಾಗಾಣಿಕೆ ವೆಚ್ಚ, ಸಮಯದ ಉಳಿತಾಯದ ಜೊತೆಯಲ್ಲಿ ಹಾಲಿನ ತಾಜಾತನ ಉಳಿಸಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ.
ಹೀಗಾಗಿ ತಾಲೂಕಿನ ತಾವರಗೇರಾದಲ್ಲಿ 3 ಸಾವಿರ ಲೀಟರ್ ಹಾಲಿನ ಸಾಮರ್ಥ್ಯದ ಬಿಎಂಸಿ ಕಾರ್ಯಾರಂಭಿಸಿದೆ. ತಾಲೂಕಿನ ಹನುಮಸಾಗರ ಬಿಎಂಸಿ ಕಟ್ಟಡ ಕಾಮಗಾರಿ ಆರಂಭಿಸಿದ್ದು, ಪ್ರಗತಿ ಹಂತದಲ್ಲಿದೆ. ಚಳಗೇರಾ, ಹನುಮನಾಳ, ದೋಟಿಹಾಳ, ಕುಂಬಳಾವತಿಯಲ್ಲಿ ಬಿಎಂಸಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ವಿಸ್ತೀರ್ಣಾಧಿಕಾರಿ ಬಸವರಾಜ ಯರದೊಡ್ಡಿ ಮಾಹಿತಿ ನೀಡಿದರು.