ಕೊಪ್ಪಳ:ನಗರದ ರುದ್ರಭೂಮಿಯೊಂದರಲ್ಲಿ ಸಮಾನ ಮನಸ್ಕರೆಲ್ಲ ಒಂದೆಡೆ ಸೇರಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು.
ಪ್ರೀತಿ ಪಾತ್ರರಿಗೊಂದು ಸಸಿ... ರುದ್ರಭೂಮಿಯಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ -
ಕೊಪ್ಪಳದ ರುದ್ರಭೂಮಿಯೊಂದರಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಆಚರಿಸಲಾಯಿತು.

ವಿಶ್ವ ಪರಿಸರ ದಿನಾಚರಣೆ
ವಿಶ್ವ ಪರಿಸರ ದಿನಾಚರಣೆ
ಸಮಾನ ಮನಸ್ಕರ ವೇದಿಕೆಯು ರುದ್ರಭೂಮಿಯಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ನಮ್ಮ ಪ್ರೀತಿಪಾತ್ರರು ಇರುವ ಈ ರುದ್ರಭೂಮಿಯಲ್ಲಿ ನಾವೆಲ್ಲ ಒಂದೊಂದು ಸಸಿ ನೆಡುತ್ತೇವೆ. ಅದನ್ನು ನಾವೇ ಪೋಷಿಸಿ ಬೆಳೆಸುತ್ತೇವೆ. ಈ ಪರಿಸರ ಹಸಿರಾಗಿ ಹಾಗೂ ಆಹ್ಲಾದಕರವಾಗಿ ಕಾಣಿಸುವಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಅರಣ್ಯ ಇಲಾಖೆ ಹಾಗೂ ಸಮಾನ ಮನಸ್ಕ ವೇದಿಕೆಯ ದಾನಿಗಳ ನೆರವಿನಿಂದ ಸಸಿ ನೆಡಲು ಗುಂಡಿ ತೋಡಿ, ನೀರುಣಿಸಿ ಹದಗೊಳಿಸಲಾಗಿತ್ತು. ಬಳಿಕ ಸಸಿ ನೆಡುವ ಮೂಲಕ ವಿನೂತನವಾಗಿ ವಿಶ್ವಪರಿಸರ ದಿನಾಚರಣೆ ಆಚರಿಸಿದರು. ಮೂಢನಂಬಿಕೆ ಬದಿಗಿಟ್ಟು ರುದ್ರಭೂಮಿಯಲ್ಲಿಯೇ ಎಲ್ಲರೂ ಉಪಹಾರ ಸೇವಿಸಿದರು.