ಗಂಗಾವತಿ: ಯಾವುದೇ ಕೀಟವಿರಲಿ, ಅದನ್ನು ಆರಂಭಿಕ ಹಂತದಲ್ಲಿದ್ದರೆ ಮಾತ್ರ ಹತೋಟಿ ಮಾಡಲು ಸಾಧ್ಯ. ನಿರ್ಲಕ್ಷಿಸಿದರೆ ವ್ಯಾಪಕವಾಗಿ ಹರಡಿ ಹಾನಿ ಮಾಡುವ ಸಾಧ್ಯತೆಯಿರುತ್ತದೆ ಎಂದು ಕೀಟಶಾಸ್ತ್ರ ತಜ್ಞ ಸುಜಯ್ ಹುರಳಿ ಹೇಳಿದರು.
ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಮಾತ್ರ ಕೀಟ ಹತೋಟಿ ಸಾಧ್ಯ: ಸುಜಯ್ ಹುರಳಿ - ಗಂಗಾವತಿ ಲೇಟೆಸ್ಟ್ ನ್ಯೂಸ್
ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ರಾಮ ಮಂದಿರದ ಆವರಣದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರೈತರ ಸಭೆ ನಡೆಸಿದರು.
ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಮಾತ್ರ ಕೀಟ ಹತೋಟಿ ಸಾಧ್ಯ: ಕೀಟಶಾಸ್ತ್ರ ತಜ್ಞ ಸುಜಯ್ ಹುರಳಿ
ಮರಳಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಭತ್ತಕ್ಕೆ ಕಣವಿನ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ರಾಮ ಮಂದಿರದ ಆವರಣದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರೈತರ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಕೀಟಶಾಸ್ತ್ರ ತಜ್ಞ ಸುಜಯ್ ಹುರಳಿ, ಯಾವುದೇ ಬೆಳೆಗೆ ಕೀಟಬಾಧೆ ತಗುಲಿದ್ದರೆ, ಅದನ್ನು ರೈತರು ತಕ್ಷಣ ಗಮನಿಸಬೇಕು. ಆರಂಭಿಕ ಹಂತದಲ್ಲಿ ಯಾವುದೇ ಕೀಟವನ್ನು ಹತೋಟಿಗೆ ತರಬಹುದು. ರೈತರು ನಿರ್ಲಕ್ಷಿಸಬಾರದು ಎಂದರು.