ಗಂಗಾವತಿ:ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೇ ಊರು ಸೇರಿಕೊಂಡಿರುವ ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಆರಂಭಿಸಲಾಗಿದೆ.
ಗಂಗಾವತಿ: ನರೇಗಾ ಯೋಜನೆಯಡಿ ಮೊದಲ ಬಾರಿಗೆ ನೀರಾವರಿ ಪ್ರದೇಶದಲ್ಲೂ ಕೆಲಸ - Employment got to migrant workers
ಕೂಲಿ ಕೆಲಸಗಾರರ ಸಾಮೂಹಿಕ ಗುಳೆ ತಪ್ಪಿಸುವ ಉದ್ದೇಶಕ್ಕೆ ತಾ.ಪಂ ಸಿಇಒ ಮೋಹನ್ ನೇತೃತ್ವದಲ್ಲಿ ವಿವಿಧ ಪಂಚಾಯಿತಿಗಳಲ್ಲಿ ಬದು ನಿರ್ಮಾಣ, ಕಾಲುವೆ ಹೂಳು ಎತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
![ಗಂಗಾವತಿ: ನರೇಗಾ ಯೋಜನೆಯಡಿ ಮೊದಲ ಬಾರಿಗೆ ನೀರಾವರಿ ಪ್ರದೇಶದಲ್ಲೂ ಕೆಲಸ The purpose of avoiding migration of coolie workers](https://etvbharatimages.akamaized.net/etvbharat/prod-images/768-512-7237187-322-7237187-1589717556026.jpg)
ನೀರಾವರಿ ಭಾಗದಲ್ಲೂ ಆರಂಭವಾದ ಮನ್ ನರೇಗಾ ಯೋಜನೆ
ಈ ಮೂಲಕ ಸಾವಿರಾರು ಕೃಷಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಇದುವರೆಗೂ ಕೇವಲ ಖುಷ್ಕಿ ಅಥವಾ ಮಳೆಯಾಶ್ರಿತ ಪ್ರದೇಶದಲ್ಲಿ ಮಾತ್ರ ನರೇಗಾ ಕೆಲಸ ಮಾಡಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನೀರಾವರಿ ಪ್ರದೇಶದಲ್ಲೂ ಕೆಲಸ ಕೈಗೊಳ್ಳಲಾಗುತ್ತಿದೆ.
ಕೂಲಿ ಕೆಲಸಗಾರರ ಸಾಮೂಹಿಕ ಗುಳೆ ತಪ್ಪಿಸುವ ಉದ್ದೇಶಕ್ಕೆ ತಾಲೂಕು ಪಂಚಾಯತಿ ಸಿಇಒ ಮೋಹನ್ ನೇತೃತ್ವದಲ್ಲಿ ಹಣವಾಳ, ಮರಳಿ, ಚಿಕ್ಕಡಂಕನಕಲ್, ಮೊದಲಾದ ಪಂಚಾಯಿತಿಗಳಲ್ಲಿ ಹೊಲ ಬದು ನಿರ್ಮಾಣ, ಕಾಲುವೆ ಹೂಳು ಎತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.