ಗಂಗಾವತಿ: ಹನ್ನೊಂದು ಅಡಿ ಉದ್ದದ ದೊಡ್ಡ ಹೆಬ್ಬಾವೊಂದು, ತಾಲೂಕಿನ ಆನೆಗೊಂದಿ ಹೋಬಳಿಯ ಅಂಜನಹಳ್ಳಿ ಸಮೀಪ ಹೊರ ಹೊಲಯದಲ್ಲಿ ಪ್ರತ್ಯಕ್ಷವಾಗಿದೆ.
ಅಂಜನಹಳ್ಳಿ ಸಮೀಪ ಇಂದಿಗೂ ವಿಜಯನಗರದ ಅರಸರ ವಂಶಸ್ಥರಿಗೆ ಸೇರಿದ ಮಧುವನವಿದೆ. ಮಧುವನದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಹೆಬ್ಬಾವು ಕಂಡಿದ್ದು, ಕೂಡಲೇ ಅಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದ ಕೂಲಿಕಾರರು ಜಮೀನಿನ ಮಾಲೀಕರ ಗಮನಕ್ಕೆ ತಂದಿದ್ದಾರೆ.
ಗಂಗಾವತಿಯಲ್ಲಿ ಹನ್ನೊಂದು ಅಡಿಯ ಹೆಬ್ಬಾವು ಪ್ರತ್ಯಕ್ಷ ಇನ್ನು ಉರಗ ತಜ್ಞ ನಾಗರಾಜ್ ಕಟ್ಟಿಮನಿ ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಹೆಬ್ಬಾವು ಹಿಡಿದಿದ್ದಾರೆ. ಬಳಿಕ ಅಂಜನಾದ್ರಿ ಬೆಟ್ಟದ ಪಶ್ಚಿಮ ಭಾಗದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೆಬ್ಬಾವು ತೆಗೆದುಕೊಂಡು ಹೋಗಿ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.
ಹನ್ನೊಂದು ಅಡಿ ಉದ್ದದ ಈ ಹೆಬ್ಬಾವು ಸುಮಾರು ಹದಿನೈದು ಕಿಲೋ ತೂಕವಿದೆ ಎಂದು ನಾಗರಾಜ್ ಹೇಳಿದರು.