ETV Bharat Karnataka

ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆ: ಅರ್ಧ ದಿನ ವಿದ್ಯುತ್ ಸ್ಥಗಿತ... ಜನರಿಗೆ ಪರದಾಟ - ಕುಷ್ಟಗಿ ತಾಲೂಕಿನಲ್ಲಿ ಮಳೆ

ನಿನ್ನೆ ರಾತ್ರಿಯಿಂದ ಮಳೆಯಾದ ಪರಿಣಾಮ ಪಟ್ಟಣದಲ್ಲಿ ವಿದ್ಯುತ್​ ಸ್ಥಗಿತಗೊಂಡು, ಜನರು ಪರದಾಡಿದರು.

ಕುಷ್ಟಗಿ ತಾಲೂಕಿನಲ್ಲಿ ಮಳೆ
Electric problem in Kushtagi due to rain
author img

By

Published : Jan 7, 2021, 5:03 PM IST

ಕುಷ್ಟಗಿ (ಕೊಪ್ಪಳ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ತಾಲೂಕಿನಲ್ಲೂ ಅಕಾಲಿಕ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡು ಸಂತೆ ಮೈದಾನದಲ್ಲಿ ವ್ಯಾಪಾರಕ್ಕೆ ಅಡ್ಡಿ ಉಂಟಾಗಿತ್ತು.

ಕುಷ್ಟಗಿ ತಾಲೂಕಿನಲ್ಲಿ ಮಳೆ

ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಮಳೆಯಾಗುತ್ತಿದ್ದು, ಇಂದು ಕೂಡ ತುಂತುರು ಮಳೆ ಮುಂದುವರೆದಿದೆ. ಈ ನಡುವೆ ರೈತರು ಮಳೆಯನ್ನು ಲೆಕ್ಕಿಸದೆ ಸಂತೆ ಮೈದಾನದಲ್ಲಿ ಸೊಪ್ಪು, ಕಾಯಿಪಲ್ಲೆಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಜಿಟಿ ಜಿಟಿ ಮಳೆಯ ಪರಿಣಾಮ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಅಡ್ಡಾದಿಡ್ಡಿ ಬೆಲೆಗೆ ಮಾರಾಟ ಮಾಡಿ ತಮ್ಮೂರುಗಳಿಗೆ ಹಿಂತಿರುಗಿದರು.

ವಿದ್ಯುತ್ ವ್ಯತ್ಯಯ:

ನಿನ್ನೆ ರಾತ್ರಿಯಿಂದ ಮಳೆಯಾದ ಪರಿಣಾಮ ವಿದ್ಯುತ್​ ಸ್ಥಗಿತಗೊಂಡಿತ್ತು. ಪರಿಣಾಮ ಕಂಪ್ಯೂಟರ್ ಡಿಟಿಪಿ, ಝರಾಕ್ಸ್, ಗಿರಣಿ, ನೀರು ಸರಬರಾಜು ಇತ್ಯಾದಿ ಸೇವಾ ಸೌಕರ್ಯಗಳಿಗೆ ವಿದ್ಯುತ್ ಇಲ್ಲದೆ ಅಗತ್ಯ ಸೌಕರ್ಯಗಳು ಸಿಗದೆ ಜನರು ಚಡಪಡಿಸಿದರು. ಮಧ್ಯಾಹ್ನದ ಬಳಿಕ ವಿದ್ಯುತ್​ ವ್ಯವಸ್ಥೆಯನ್ನು ಇಲಾಖೆ ನೀಡಿತು.

ABOUT THE AUTHOR

...view details