ಕರ್ನಾಟಕ

karnataka

ETV Bharat / state

ಗಂಗಾವತಿ ತಾಲೂಕುಗಳ ಗ್ರಾ.ಪಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿ - election announces for karatagi village panchayath

ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಈಗಾಗಲೆ ಪ್ರಕಟವಾಗಿದೆ. ಇದೀಗ ಆಯಾ ಪಂಚಾಯಿತಿವಾರು ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ದಿನಾಂಕ ನಿಗದಿಯಾಗಿದೆ.

election announces for kanakagiri karatagi gp
ಚುನಾವಣೆ ನಿಗದಿ

By

Published : Jan 19, 2021, 7:17 PM IST

ಗಂಗಾವತಿ: ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ಚುನಾವಣೆಯಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಈಗಾಗಲೇ ಪ್ರಕಟವಾಗಿದೆ.

ಚುನಾವಣೆ ನಿಗದಿ

ಇದೀಗ ಆಯಾ ಪಂಚಾಯಿತಿವಾರು ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ದಿನಾಂಕ ನಿಗದಿಯಾಗಿದೆ. ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕಿನ ಒಟ್ಟು 39 ಗ್ರಾಮ ಪಂಚಾಯಿತಿಗಳಿಗೆ ಜ27ರಿಂದ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜ.30ಕ್ಕೆ ಮುಕ್ತಾಯವಾಗಲಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮಾಹಿತಿ ಹೀಗಿದೆ:

ಕಾರಟಗಿ ತಾಲೂಕಿನ ಮರಲಾನಹಳ್ಳಿ, ಮೈಲಾಪುರ, ಬೆನ್ನೂರು ಜ.27, ಬೇವಿನಾಳ, ಚಳ್ಳೂರು, ಯರಡೋಣ, ಬರಗೂರು ಜ.28, ಬೂದಗುಂಪಾ, ಹುಳ್ಕಿಹಾಳ, ಗುಂಡೂರು ಹಾಗೂ ಉಳೇನೂರು ಪಂಚಾಯಿತಿಗೆ ಜ.30ಕ್ಕೆ ಚುನಾವಣೆ ನಡೆಯಲಿವೆ.

ಚುನಾವಣೆ ನಿಗದಿ

ಗಂಗಾವತಿ ತಾಲೂಕಿನ ಆನೆಗೊಂದಿ, ಹೊಸ್ಕೇರಾ, ಹೇರೂರು, ಸಂಗಾಪುರ ಜ.27, ಚಿಕ್ಕಬೆಣಕಲ್, ಹಣವಾಳ, ಮರಳಿ, ಢಣಾಪುರ, ಸಣಾಪುರ ಜ. 28, ಮಲ್ಲಾಪುರ, ಜಂಗಮರಕಲ್ಗುಡಿ, ವಡ್ಡರಹಟ್ಟಿ, ಬಸವಪಟ್ಟಣ, ವೆಂಕಟಗಿರಿ ಜ.29 ಹಾಗೂ ಜ.30ರಂದು ಆಗೋಲಿ, ಕೇಸರಹಟ್ಟಿ, ಶ್ರೀರಾಮನಗರ ಪಂಚಾಯಿತಿಗೆ ಚುನಾವಣೆ ನಡೆಯಲಿವೆ.

ಕನಕಗಿರಿ ತಾಲೂಕಿನಲ್ಲಿ ಜ27ರಂದು ಚಿಕ್ಕಮಾದಿನಾಳ, ಚಿಕ್ಕ ಡಂಕನಕಲ್, ಕರಡೋಣಿ, ಜೀರಾಳ, ಜ.28 ರಂದು ಸುಳೇಕಲ್, ಗೌರಿಪುರ, ನವಲಿ, ಬಸರೀಹಾಳ ಹಾಗೂ ಜ.29ರಂದು ಮುಸಲಾಪುರ, ಹುಲಿಹೈದರ, ಹಿರೇಖ್ಯಾಡ ಪಂಚಾಯಿತಿಗೆ ಚುನಾವಣೆ ನಡೆಯಲಿವೆ.

ಚುನಾವಣೆ ನಿಗದಿ

ಇದನ್ನೂ ಓದಿ:ಜ.29 ರಿಂದ ಸಂಸತ್ ಅಧಿವೇಶನ ಪ್ರಾರಂಭ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ

For All Latest Updates

TAGGED:

ABOUT THE AUTHOR

...view details