ಗಂಗಾವತಿ: ನಗರದ ಒಣ ಮತ್ತು ಹಸಿ ಕಸ ವಿಲೇವಾರಿ ಸಮಸ್ಯೆಯಾಗುತ್ತಿರುವ ಹಿನ್ನೆಲೆ, ಘನತ್ಯಾಜ್ಯ ವಿಲೇವಾರಿಗಾಗಿಯೇ ಮನೆ ಮನೆಯ ಕಸ ಸಂಗ್ರಹಕ್ಕಾಗಿ ನಗರಸಭೆಗೆ ಎಂಟು ಮಿನಿ ಟಿಪ್ಪರ್ ವಾಹನಗಳು ಸೇರ್ಪಡೆಯಾಗಿವೆ.
ಗಂಗಾವತಿ ನಗರಸಭೆಗೆ ಎಂಟು ತ್ಯಾಜ್ಯ ವಿಲೇವಾರಿ ವಾಹನಗಳ ರವಾನೆ
ಘನತ್ಯಾಜ್ಯ ವಿಲೇವಾರಿಗಾಗಿ ಮನೆ ಮನೆಯ ಕಸ ಸಂಗ್ರಹಕ್ಕಾಗಿ, ಗಂಗಾವತಿಯ ನಗರಸಭೆಗೆ ಎಂಟು ಮಿನಿ ಟಿಪ್ಪರ್ ವಾಹನಗಳು ಸೇರ್ಪಡೆಯಾಗಿವೆ. ಹೊಸ ಮಾದರಿಯ ಈ ವಾಹನಗಳಲ್ಲಿ ಕಸ ಸಂಗ್ರಹಿಸಿದ ಬಳಿಕ ಮುಚ್ಚುವ ಹಾಗೂ ಸುರಕ್ಷಿತವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸುವ ವ್ಯವಸ್ಥೆಯಿದೆ.
ಗಂಗಾವತಿ ನಗರಸಭೆಗೆ ಎಂಟು ತ್ಯಾಜ್ಯ ವಿಲೇವಾರಿ ವಾಹನಗಳ ರವಾನೆ
ಘನತ್ಯಾಜ್ಯ ವಿಲೇವಾರಿ ಯೋಜನೆಯಡಿ 14ನೇ ಹಣಕಾಸು ಯೋಜನೆಯಲ್ಲಿ, ಸುಮಾರು ₹50 ಲಕ್ಷ ಮೊತ್ತದಲ್ಲಿ ಎಂಟು ಟಿಪ್ಪರ್ ಖರೀದಿಸಲಾಗಿದೆ. ಒಣ ಮತ್ತು ಹಸಿ ಕಸ ಸಂಗ್ರಹಿಸಲು ಪ್ರತ್ಯೇಕ ಕಂಟೇನರ್ಗಳಿರುವುದು ಈ ವಾಹನಗಳ ವಿಶೇಷತೆಯಾಗಿದೆ.
ಸದ್ಯ ಇರುವ ಟಿಪ್ಪರ್ಗಳು ತೆರೆದ ವಾಹನಗಳಾಗಿದ್ದು, ಕಸ ಸಂಗ್ರಹಿಸಿ ಸಾಗಿಸುವಾಗ ರಸ್ತೆಯಲ್ಲಿ ಬೀಳುವುದು ಸಹಜವಾಗಿತ್ತು. ಹೊಸ ಮಾದರಿಯ ವಾಹನಗಳಲ್ಲಿ ಕಸ ಸಂಗ್ರಹಿಸಿದ ಬಳಿಕ ಮುಚ್ಚುವ ಹಾಗೂ ಸುರಕ್ಷಿತವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸುವ ವ್ಯವಸ್ಥೆಯಿದೆ.