ಕರ್ನಾಟಕ

karnataka

ETV Bharat / state

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ಭಯ : ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ ಅಪ್ಪ! - ವಿದ್ಯಾರ್ಥಿಗಳಿಗೆ ಮೊಟ್ಟೆ ವಿರತಣೆ

Egg distribution issue in Karnataka: ಮೊಟ್ಟೆ ವಿಚಾರ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ನಡುವೆ ಶಾಲೆಯಲ್ಲಿ ಮೊಟ್ಟೆ ಕೊಡ್ತಾರೆ ಎನ್ನುವ ಭಯ ಕೆಲ ಪೋಷಕರನ್ನು ಕಾಡಿದ್ರೆ, ಇನ್ನೂ ಕೆಲವರು ಮೊಟ್ಟೆ ಕೊಟ್ರೆ ಒಳ್ಳೆಯದು ಅಂತಿದ್ದಾರೆ. ಈ ಮಧ್ಯೆ ಕೊಪ್ಪಳದಲ್ಲಿ ಪೋಷಕರೊಬ್ಬರು ಮೊಟ್ಟೆಗೆ ಭಯಪಟ್ಟು ತಮ್ಮ ಮಗನನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದ್ದಾರೆ.

egg-distribution-to-children-father-received-his-sons-tc
ಮೊಟ್ಟೆ ವಿರತಣೆ

By

Published : Dec 19, 2021, 11:59 AM IST

Updated : Dec 20, 2021, 11:58 AM IST

ಕೊಪ್ಪಳ : ಸದ್ಯ ರಾಜ್ಯದಲ್ಲಿ ಮೊಟ್ಟೆ ವಿತರಣೆಯ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಈ ನಡುವೆ ಜಿಲ್ಲೆಯಲ್ಲಿ ಪೋಷಕರೊಬ್ಬರು ಮೊಟ್ಟೆ ಭಯಕ್ಕೆ ತಮ್ಮ ಮಗನನ್ನು ಸರ್ಕಾರಿ ಶಾಲೆ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ನಿವಾಸಿ, ರಾಷ್ಟ್ರೀಯ ಬಸವ ದಳದ ಮುಖಂಡ ವೀರಣ್ಣ ಕೊರ್ಲಹಳ್ಳಿ ಎಂಬುವರು ಸರ್ಕಾರಿ ಶಾಲೆಗೆ ತಮ್ಮ ಮಗನನ್ನು ಒಂದನೇ ತರಗತಿಗೆ ಆಡ್ಮಿಷನ್ ಮಾಡಿಸಿದ್ದರು. ಇತ್ತೀಚೆಗೆ ಸರ್ಕಾರ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಾಗಿ ತಿಳಿಸಿತ್ತು. ಇದಕ್ಕೆ ನನ್ನ ಧರ್ಮದ ವಿರೋಧವಿದೆ ಎಂದು ವೀರಣ್ಣ ಕೊರ್ಲಹಳ್ಳಿ ಶಾಲೆಯಿಂದಲೇ ಮಗನನ್ನು ವರ್ಗಾವಣೆ ಮಾಡಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ಭಯಕ್ಕೆ ಖಾಸಗಿ ಶಾಲೆಗೆ ಸೇರಿಸಿದ ಅಪ್ಪ

ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದ್ರೆ ಬೇರೆ ಮಕ್ಕಳು ತಿನ್ನೋದನ್ನ ನೋಡಿ ಒಂದಲ್ಲ ಒಂದು ದಿನ ಅವನು ತಿನ್ನುತ್ತಾನೆ. ಇದೇ ಕಾರಣಕ್ಕೆ ಸರ್ಕಾರಿ ಶಾಲೆ ಬಿಡಿಸಿದ್ದೇನೆ ಎಂದು ಸ್ವತಃ ವೀರಣ್ಣ ಕೊರ್ಲಹಳ್ಳಿ ಅವರು ಮಗನ ಟಿಸಿ ಪಡೆದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Last Updated : Dec 20, 2021, 11:58 AM IST

ABOUT THE AUTHOR

...view details