ಕರ್ನಾಟಕ

karnataka

By

Published : Sep 13, 2019, 7:25 PM IST

ETV Bharat / state

ಕೊಪ್ಪಳದ ಬಾಲಕನ ಕರೆಗೆ ಸ್ಪಂದನೆ: ಇದೇ ವರ್ಷದಲ್ಲಿ ಸಮವಸ್ತ್ರ

ಕೊಪ್ಪಳ ಶಾಲಾ ಬಾಲಕ ಶಾಲೆಯಲ್ಲಿ ವರ್ಷ ಕಳೆದರೂ ಕೇವಲ ಒಂದೇ ಜೊತೆ ಸಮವಸ್ತ್ರ ನೀಡುತ್ತಿದ್ದಾರೆ ಎಂದು ಕೋರ್ಟ್​ ಮೆಟ್ಟಿಲೇರಿದ್ದ. ಬಾಲಕನ ಕರೆಗೆ ಓಗೊಟ್ಟ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಸುರೇಶ್​ ಕುಮಾರ್​, ಇದೇ ವರ್ಷದಲ್ಲಿ ಮಕ್ಕಳಿಗೆ ಮತ್ತೊಂದು ಜೊತೆ ಸಮವಸ್ತ್ರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಸುರೇಶ್​ ಕುಮಾರ್, Suresh kumar

ಗಂಗಾವತಿ:ಕೊಪ್ಪಳದ ಬಾಲಕನೊಬ್ಬ ಸಲ್ಲಿಸಿದ ಮನವಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸ್ಪಂದಿಸಿದ್ದು, ಇದೇ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಸುರೇಶ್​ ಕುಮಾರ್​ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್​ ಕುಮಾರ್​

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಶಾಲಾ ಬಾಲಕ ಶಾಲೆಯಲ್ಲಿ ವರ್ಷ ಕಳೆದರೂ ಕೇವಲ ಒಂದೇ ಜೊತೆ ಸಮವಸ್ತ್ರ ನೀಡುತ್ತಿದ್ದಾರೆ ಎಂದು ಕೋರ್ಟ್​ ಮೆಟ್ಟಿಲೇರಿದ್ದ. ಬಾಲಕನ ಕರೆಗೆ ಓಗೊಟ್ಟ ಸಚಿವರು ಇದೇ ವರ್ಷದಲ್ಲಿ ಮಕ್ಕಳಿಗೆ ಸಮವಸ್ತ್ರ ನೀಡಲಾಗುತ್ತದೆ ಎಂದರು.

ಕೆಲವೊಂದು ಸಂತೆಗಳು ಈ ಹಿಂದಿನ ಸರ್ಕಾರದಲ್ಲಿ ನಡೆದಿವೆ. ಉದಾಸೀನದಿಂದಲೊ, ಬೇರೆ ಕಾರಣದಿಂದಲೋ ಈ ರೀತಿ ನಡೆದಿದೆ. ಮಕ್ಕಳ ಅಗತ್ಯತೆ ಮತ್ತು ಶಿಕ್ಷಣದಲ್ಲಿದ ವಿಷಯದಲ್ಲಿ ಯಾರೂ ಚೌಕಾಶಿ ಮಾಡಬಾರದು. ಆದಷ್ಟು ತ್ವರಿತವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸಲಾಗುವುದು. ವಯೋಮಿತಿ ಮೀರಿದ ಶಿಕ್ಷಕರ ವರ್ಗಾವಣೆಗೆ ನೀತಿ ರೂಪಿಸಲಾಗುವುದು ಎಂದರು.

ಖಾಸಗಿ ಶಾಲೆಗಳು ವಸೂಲಿ ಮಾಡುವ ಶುಲ್ಕ ನಿಯಂತ್ರಣಕ್ಕೂ ನಿಯಮ ರೂಪಿಸಲಾಗುವುದು. ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬಗ್ಗೆ ತಜ್ಞರೊಂದಿಗೆ ಮಾತನಾಡಿ ನೀತಿ ರೂಪಿಸಲಾಗುವುದು ಎಂದರು.

ABOUT THE AUTHOR

...view details