ಕರ್ನಾಟಕ

karnataka

ETV Bharat / state

ಈಡಿಗ ಸಮುದಾಯಕ್ಕೆ ಆದ್ಯತೆ ನೀಡಿ, ಇಲ್ಲ ಚುನಾವಣೆಯಲ್ಲಿ ನಮ್ಮ ಆಸೆ ಬಿಡಿ: ಪ್ರಣವಾನಂದ ಸ್ವಾಮೀಜಿ - ಗಂಗಾವತಿ

ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮುದಾಯ ಕಡೆಗಣನೆಗೆ ಒಳಾಗಾಗಿದೆ. ಸೂಕ್ತ ಆದ್ಯತೆ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲ ಸಿಗಲಿದೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Pranavananda Swamiji
ಈಡಿಗ ಸಮುದಾಯ ಪ್ರಣವಾನಂದ ಸ್ವಾಮೀಜಿ

By

Published : Jul 24, 2021, 6:17 PM IST

ಗಂಗಾವತಿ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡೆಗಣನೆಗೆ ಒಳಗಾದ ನಮ್ಮ ಸಮುದಾಯಕ್ಕೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಸಮುದಾಯದ ಮತಗಳ ಮೇಲೆ ಬಿಜೆಪಿ ಆಸೆ ಇಟ್ಟುಕೊಳ್ಳುವುದು ಬೇಡ ಎಂದು ಈಡಿಗ ಸಮುದಾಯ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಕ್ಕೆ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ

ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಿದರೆ, ಆ ಸ್ಥಾನದಲ್ಲಿ ಹಿಂದುಳಿದ ಈಡಿಗ ಸಮುದಾಯ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಿಎಂ ಮಾಡಿ ಎಂದು ಆಗ್ರಹಿಸಿದರು.

ಒಂದು ಕಾಲದಲ್ಲಿ ಇಡೀ ರಾಜ್ಯವನ್ನು ನಮ್ಮ ಆದಾಯ (ಸಾರಾಯಿ ವೃತ್ತಿ) ಸಾಕಿ ಸಲುಹಿದ ವೃತ್ತಿಯಿಂದ ಬಂದ ನಮ್ಮ ಸಮುದಾಯ ಇಂದು ಬಿಜೆಪಿ ಸರ್ಕಾರದಲ್ಲಿ ಕಡೆಗಣನೆಗೆ ಒಳಗಾಗಿದೆ. ಸೂಕ್ತ ಆದ್ಯತೆ ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲ ಸಿಗಲಿದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details