ಕರ್ನಾಟಕ

karnataka

ETV Bharat / state

ರಸ್ತೆಬದಿ ಗಿಡಗಳಿಗೆ ಸ್ವಂತ ಖರ್ಚಿನಲ್ಲಿ ನೀರುಣಿಸುತ್ತಿರುವ ಪರಿಸರ ಪ್ರೇಮಿ...! - eco lover watering roadside plants with his own expense

ಇನ್ನೊಬ್ಬರಿಗಾಗಿ ಖರ್ಚು ಮಾಡಲು ಹಿಂದು ಮುಂದು ನೋಡುವ ಜನರ ನಡುವೆ ಗಂಗಾವತಿಯ ಯುವಕನೊಬ್ಬ ತನ್ನ ಸ್ವಂತ ಖರ್ಚಿನಲ್ಲಿ ಪ್ರತಿ ವಾರ ನಗರದ ಸುಮಾರು ಸಾವಿರಕ್ಕೂ ಹೆಚ್ಚು ಗಿಡಗಳಿಗೆ ನೀರುಣಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

eco lover
ಪರಿಸರ ಪ್ರೇಮಿ

By

Published : Apr 15, 2020, 5:26 PM IST

Updated : Apr 15, 2020, 6:59 PM IST

ಗಂಗಾವತಿ (ಕೊಪ್ಪಳ): ನಮ್ಮ ಮನೆ ಕಾಂಪೌಡ್​​​​ನಲ್ಲಿ ಬೆಳೆಸಿರುವ ಗಿಡಮರಗಳಿಗೆ ವಿಶೇಷ ಕಾಳಜಿ ವಹಿಸಿ ಪ್ರತಿ ದಿನ ನೀರುಣಿಸುವ ನಾವು ಬೀದಿ ಬದಿಯ ಗಿಡಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಗರದ ಯುವಕನೊಬ್ಬ ತನ್ನ ಸ್ವಂತ ಖರ್ಚಿನಲ್ಲಿ ನಗರದ ಸಾವಿರಾರು ಗಿಡಗಳಿಗೆ ವಾರಕ್ಕೊಮ್ಮೆ ನೀರುಣಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸ್ವಂತ ಖರ್ಚಿನಲ್ಲಿ ಗಿಡಗಳಿಗೆ ನೀರುಣಿಸುತ್ತಿರುವ ಪರಿಸರ ಪ್ರೇಮಿ

ನಗರದ ಎಲ್ಐಸಿ ಆಫೀಸ್ ಸಮೀಪದ ನಿವಾಸಿ ಮಧುಚಂದ್ರ ಶೆಡ್ಡೆ ಎಂಬ ಯುವಕ ನಗರದಲ್ಲಿರುವ ಎಲ್ಲಾ ಮರಗಿಡಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ಮೂಲಕ ಪರಿಸರ ರಕ್ಷಣೆಯಲ್ಲಿ ತೊಡಗಿದ್ದಾರೆ. ಎಲ್ಲರೂ ಕೊರೊನಾದ ತುರ್ತು ಪರಿಸ್ಥಿತಿಯಲ್ಲಿ ತೊಡಗಿರುವಾಗ ಈ ಯುವಕ ಮಾತ್ರ ಪರಸರ ಸಂರಕ್ಷಣೆಗೆ ಮುಂದಾಗಿರುವುದು ಜನರ ಗಮನ ಸೆಳೆಯುತ್ತಿದೆ. 3 ಸಾವಿರ ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್​​​​​ ತುಂಬಾ ನೀರು ತುಂಬಿಸಿ ಪ್ರತಿ ವಾರ ರಸ್ತೆ ಬದಿ ಗಿಡಗಳಿಗೆ ನೀರು ಹಾಯಿಸುತ್ತಾರೆ.

ಈ ಟ್ಯಾಂಕರ್​​​​​​​​ಗೆ ಒಂದು ಬಾರಿಗೆ ಒಂದು ಸಾವಿರ ರೂಪಾಯಿ ಬಾಡಿಗೆ ಇದೆ. ಆದರೆ ವಡ್ಡರಹಟ್ಟಿಯ ಟ್ಯಾಂಕರ್ ಉದ್ಯಮಿ ತಿಪ್ಪೇಸ್ವಾಮಿಗೌಡ ಎಂಬುವವರು, ಈ ಯುವಕನ ಕಾರ್ಯಕ್ಕೆ ಮೆಚ್ಚಿ ಉಚಿತವಾಗಿ ಟ್ಯಾಂಕರ್​​ನಲ್ಲಿ ಪೂರೈಕೆ ಮಾಡುತ್ತಿರುವುದಲ್ಲದೆ, ಯುವಕನಿಂದ ಪ್ರೇರಣೆ ಪಡೆದು ತಾವೂ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ನಗರದ ಸಾವಿರಕ್ಕೂ ಹೆಚ್ಚು ಗಿಡಮರಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್​​​ನಲ್ಲಿ ಬಂದು ನೀರು ಹಾಯಿಸಿ ಹೋಗುವುದು ಇವರ ಕಾಯಕ.

Last Updated : Apr 15, 2020, 6:59 PM IST

For All Latest Updates

TAGGED:

ABOUT THE AUTHOR

...view details