ಗಂಗಾವತಿ:ರಾಜ್ಯದ 28 ಮಂದಿ ಸಂಸದರು ಹಾಗೂ ಕೇಂದ್ರದ ಸಚಿವರಿಗೆ ಸೀರೆ, ಬಳೆ ಕಳುಹಿಸಿಕೊಡುವುದಾಗಿ ಹೇಳಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆಗೆ ಕೇಂದ್ರದ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದು, ಸೀರೆ ಕಳಿಸಲಿ ಬಿಡಿ, ಬಡವರಿಗೆ ಕೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
ಗಂಗಾವತಿ ಮಾರ್ಗವಾಗಿ ರಾಯಚೂರಿಗೆ ಹೊರಟ್ಟಿದ್ದ ಸದಾನಂದ ಗೌಡರು, ಶಾಸಕ ಪರಣ್ಣ ಮುನವಳ್ಳಿ ನಿವಾಸಕ್ಕೆ ಆಗಮಿಸಿ ಔಪಚಾರಿಕವಾಗಿ ಮಾತನಾಡಿದರು.