ಗಂಗಾವತಿ: ಕಳೆದ ಎರಡು ತಿಂಗಳಿಂದ ರಸ್ತೆಗೆ ಇಳಿಯದ ಹಾಗೂ ಜನರಿಗೆ ಮುಖ ತೋರಿಸದಂತಾಗಿದ್ದ ಸಾರಿಗೆ ಇಲಾಖೆಯ ವಾಹನಗಳು ಸೋಮವಾರದಿಂದ ಮತ್ತೆ ಬೀದಿಗೆ ಇಳಿಯಲಿವೆ. ಇದಕ್ಕಾಗಿ ಇಲಾಖೆ ಇಲ್ಲಿನ ಘಟಕದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಲಸಿಕೆ ಹಾಕಿಕೊಂಡ ಸಾರಿಗೆ ಸಿಬ್ಬಂದಿಗೆ ಮಾತ್ರ ಡ್ಯೂಟಿಗೆ ಅನುಮತಿ - Bus Traffic Commencement in Gangavathi
ಸರ್ಕಾರದ ಆದೇಶದ ಪ್ರಕಾರ, ಕೇವಲ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮುಖ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗುವುದು ಎಂದು ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ ತಿಳಿಸಿದರು.
![ಲಸಿಕೆ ಹಾಕಿಕೊಂಡ ಸಾರಿಗೆ ಸಿಬ್ಬಂದಿಗೆ ಮಾತ್ರ ಡ್ಯೂಟಿಗೆ ಅನುಮತಿ govt bus](https://etvbharatimages.akamaized.net/etvbharat/prod-images/768-512-12204623-thumbnail-3x2-sanju.jpg)
ಸಾರಿಗೆ ಘಟಕದ ಕಚೇರಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ, ಸೋಮವಾರದಿಂದ ಮತ್ತೆ ರಸ್ತೆಗೆ ಇಳಿಯಲಿರುವ ವಾಹನಗಳನ್ನು ಯಾವ ರಸ್ತೆ ಹಾಗೂ ಮಾರ್ಗದಲ್ಲಿ ಓಡಿಸಬೇಕು, ಎಷ್ಟು ಪ್ರಮಾಣದ ವಾಹನಗಳನ್ನು ಸಂಚಾರಕ್ಕೆ ಬಿಡಬೇಕು ಎಂಬುವುದರ ಬಗ್ಗೆ ಸಭೆ ನಡೆಸಿದರು. ನಂತರ ಈ ಬಗ್ಗೆ`ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ, ಕೇವಲ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮುಖ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗುವುದು ಎಂದರು.
ಓದಿ:ಸಿಎಂ ಭೇಟಿಯಾದ ಅವಧೂತ: 3ನೇ ಅಲೆ ಬಗ್ಗೆ ಎಚ್ಚರ ಎಂದ ವಿನಯ್ ಗುರೂಜಿ