ಕೊಪ್ಪಳ/ಗಂಗಾವತಿ :ಗಂಗಾವತಿಯ ಲ್ಯಾಂಡ್ ಮಾರ್ಕ್ ಆಗಿರುವ ಗ್ರಾಮ ದೇವತೆ ದುರ್ಗಮ್ಮನ ಜಾತ್ರೆ ಹಾಗೂ ರಥೋತ್ಸವವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಗಂಗಾವತಿಯಲ್ಲಿ ದುರ್ಗಮ್ಮನ ಅದ್ಧೂರಿ ರಥೋತ್ಸವ: ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ - gangavathi news
ಗಂಗಾವತಿಯ ಲ್ಯಾಂಡ್ ಮಾರ್ಕ್ ಆಗಿರುವ ಗ್ರಾಮ ದೇವತೆ ದುರ್ಗಮ್ಮನ ಜಾತ್ರೆ ಹಾಗೂ ರಥೋತ್ಸವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಗಂಗಾವತಿಯಲ್ಲಿ ದುರ್ಗಮ್ಮನ ಅದ್ಧೂರಿ ರಥೋತ್ಸವ..ಬಾನಂಗಳದಿಂದ ಜಾರಿದ ಪುಷ್ಪವೃಷ್ಟಿ
ಸಂಜೆ ಗೋಧೂಳಿ ಸಮಯದಲ್ಲಿ ಪಟಾಕಿ ಸಿಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಬಾನಂಗಳದಿಂದ ಅಮ್ಮನವರ ರಥೋತ್ಸವದ ಮೇಲೆ ಲೋಹದ ಹಕ್ಕಿಯ ಮೂಲಕ ಭಕ್ತರೊಬ್ಬರು ಪುಷ್ಟವೃಷ್ಟಿ ಮಾಡಿಸಿದ್ರು. ದೇಗುಲದಿಂದ ಹೊರಟ ರಥೋತ್ಸವ, ಗಾಂಧಿ ವೃತ್ತದ ಮೂಲಕ ಸಾಗಿ ಬಸವಣ್ಣ ವೃತ್ತದ ಪಾದಗಟ್ಟೆಗೆ ತಲುಪಿ ಮರಳಿ ಅದೇ ಮಾರ್ಗದಲ್ಲಿ ವಾಪಾಸ್ ಮರಳಿತು.
ಐದು ವರ್ಷಕ್ಕೊಮ್ಮೆ ನಡೆಯುವ ಮಹಾ ರಥೋತ್ಸವ ಇದಾಗಿದ್ದು,ಬೆಳಗ್ಗೆ ಕಲ್ಮಠದಿಂದ ದುರ್ಗಮ್ಮ ದೇಗುಲದವರೆಗೂ 108 ಮಹಿಳೆಯರು ಕುಂಭ ಕಳಸ ಹೊತ್ತು ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.