ಕೊಪ್ಪಳ: ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರದಿಂದಾಗಿ ಕಂಗೆಟ್ಟಿರುವ ಸಾರಿಗೆ ಸಂಸ್ಥೆಯ ಕೊಪ್ಪಳದ ವಿಭಾಗೀಯ ಅಧಿಕಾರಿಗಳು, ಸಸ್ಪೆನ್ಷನ್ ರಿವೋಕ್ (ಅಮಾನತು ರದ್ದತಿ) ಅಸ್ತ್ರ ಪ್ರಯೋಗಿಸಿ ಒಂದೊಂದೇ ಬಸ್ಗಳನ್ನು ರಸ್ತೆಗಿಳಿಸುತ್ತಿದ್ದಾರೆ.
ವಿವಿಧ ಕಾರಣಗಳಿಗೆ ಸಸ್ಪೆಂಡ್ ಆಗಿರುವ ಚಾಲಕರು, ನಿರ್ವಾಹಕರು ಹಾಗೂ ಚಾಲಕ ಕಂ ನಿರ್ವಾಹಕರ ಅಮಾನತು ಹಿಂಪಡೆದು ಕರ್ತವ್ಯಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಈ ಸಿಬ್ಬಂದಿ ಬಸ್ಗಳನ್ನು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ತಂದು ನಿಲ್ಲಿಸುತ್ತಿದ್ದಾರೆ.