ಕೊಪ್ಪಳ: ಖಾಸಗಿ ಕಂಪನಿಗೆ ಸೇರಿದ ಲಾರಿ ಚಾಲಕನೋರ್ವ ಟೈರ್ ಇಲ್ಲದೆ ಬರೀ ಡಿಸ್ಕ್ ಮೇಲೆಯೇ ಲಾರಿ ಓಡಿಸಿದ್ದಾನೆ.
ಟೈರ್ ಇಲ್ಲದೆ ಡಿಸ್ಕ್ ಮೇಲೆ ಲಾರಿ ಓಡಿಸಿದ ಚಾಲಕ: ವಿಡಿಯೋ ನೋಡಿ - ಟೈರ್ ಇಲ್ಲದೆ ವಾಹನ ಚಾಲನೆ
ಲಾರಿ ಚಾಲಕನೋರ್ವ ಟೈರ್ ಇಲ್ಲದೆ ಕೇವಲ ಡಿಸ್ಕ್ ಮೇಲೆಯೇ ಲಾರಿ ಓಡಿಸಿರುವ ಅಪಾಯಕಾರಿ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಟೈರ್ ಇಲ್ಲದೆ ಲಾರಿ ಚಾಲನೆ
ನಿನ್ನೆ ರಾತ್ರಿ ಕೊಪ್ಪಳ ನಗರ ಪ್ರವೇಶಿಸುವ ರಸ್ತೆಯಲ್ಲಿ ಲಾರಿ ಟೈರ್ ಸ್ಪೋಟಗೊಂಡಿದೆ. ಆದರೂ ಸಹ ಚಾಲಕ ಲಾರಿ ನಿಲ್ಲಿಸದೆ ಚಲಾಯಿಸಿಕೊಂಡು ಬಂದಿದ್ದ. ಸುಮಾರು 10ಕ್ಕೂ ಹೆಚ್ಚು ಕಿಲೋಮೀಟರ್ ಟೈರ್ ಇಲ್ಲದೆ ಇದೇ ರೀತಿ ಲಾರಿ ಚಾಲನೆ ಮಾಡಿದ್ದಾನೆ. ಸ್ಥಳೀಯರ ಮೊಬೈಲ್ನಲ್ಲಿ ಚಾಲಕನ ಅಪಾಯಕಾರಿ ವರ್ತನೆ ಸೆರೆಯಾಗಿದೆ.
ಇದನ್ನು ಗಮನಿಸಿದ ಇತರೆ ಲಾರಿ ಚಾಲಕರು ಓವರ್‌ಟೆಕ್ ಮಾಡಿ ಲಾರಿ ನಿಲ್ಲಿಸಿ, ಚಾಲಕನನ್ನು ತರಾಟೆಗೆ ತೆಗೆದುಕೊಂಡರು.