ಗಂಗಾವತಿ: ಸಾರ್ವಜನಿಕರಿಗೆ ಉಪಯುಕ್ತವಾಗಿರುವ ಕುಡಿಯುವ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಲು ಯತ್ನಿಸುತ್ತಿದ್ದು, ಈ ಕೂಡಲೇ ಕ್ರಮ ಕೈಗೊಳ್ಳುವಂತೆ ವಾರ್ಡ್ ಮಹಿಳೆಯರು ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುಡಿಯುವ ನೀರಿನ ಟ್ಯಾಂಕ್ ಸ್ಥಳ ಒತ್ತುವರಿ: ಕ್ರಮಕ್ಕೆ ಆಗ್ರಹ - ಗಂಗಾವತಿ ನಗರಸಭೆ
ಕುಡಿಯುವ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಲು ಯತ್ನಿಸುತ್ತಿದ್ದು, ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಗಂಗಾವತಿಯ ಮಹಿಳೆಯರು ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುಡಿಯುವ ನೀರಿನ ಟ್ಯಾಂಕ್ ಸೇರಿ ಸ್ಥಳ ಒತ್ತುವರಿ
ನಗರಸಭೆಯ ಸದಸ್ಯ ಎಫ್. ರಾಘವೇಂದ್ರ ನೇತೃತ್ವದಲ್ಲಿ ನಗರಸಭೆಗೆ ಆಗಮಿಸಿದ ವಾರ್ಡ್ ನಿವಾಸಿಗಳು, ಪೌರಾಯಕ್ತ ಶೇಖರಪ್ಪ ಈಳಿಗೇರ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಕೆಲ ದಿನಗಳಿಂದ ವಾರ್ಡ್ನಲ್ಲಿರುವ ಪ್ರಭಾವಿಗಳು ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಒತ್ತುವರಿ ಮಾಡಿ ಸುತ್ತಲೂ ಪಿಲ್ಲರ್ ಎಬ್ಬಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಟ್ಯಾಂಕ್ ತೆರವು ಮಾಡುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.