ಕುಷ್ಟಗಿ (ಕೊಪ್ಪಳ):ಲಾಕ್ಡೌನ್ ಸಂದರ್ಭದಲ್ಲಿ ದಾನಿಗಳು ನೀಡಿದ ಆಹಾರ ಸಾಮಾಗ್ರಿಗಳನ್ನು ಗ್ರಾಮ ಪಂಚಾಯತ್‌ವಾರು ವಿತರಿಸದೇ ಉಳಿಸಿಕೊಂಡಿರುವ ಸುದ್ದಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಇನ್ನೂ ಜನರ ಕೈ ಸೇರಿಲ್ಲ ದಾನಿಗಳು ಕೊಟ್ಟ ಆಹಾರ ಕಿಟ್‌ಗಳು.. - ಇನ್ನೂ ಜನರ ಕೈ ಸೇರಿಲ್ಲ ದಾನಿಗಳು ಕೊಟ್ಟ ಆಹಾರ ಕಿಟ್
ತಾಲೂಕಿನ 36 ಗ್ರಾಮ ಪಂಚಾಯತ್‌ಗಳ ಪೈಕಿ ಇನ್ನೂ 11 ಗ್ರಾಮ ಪಂಚಾಯತ್‌ಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿಲ್ಲ. ಈ ಬಗ್ಗೆ ತಾಪಂ ಸಿಬ್ಬಂದಿ ವಿಚಾರಿಸಿದಾಗ ಗುರುವಾರ ವಿತರಿಸುವುದಾಗಿ ತಿಳಿಸಿದ್ದಾರೆ.
ಗ್ರಾನೈಟ್ ಮಾಲೀಕರು ತಾಲೂಕು ಆಡಳಿತಕ್ಕೆ 700ಕ್ಕೂ ಅಧಿಕ ಆಹಾರ ಕಿಟ್ ವಿತರಿಸಿದ್ದರು. ಈ ಕಿಟ್ಗಳನ್ನು ಗ್ರಾಮ ಪಂಚಾಯತ್‌ವಾರು ಹಂಚಿಕೆ ಮಾಡಲು ತಾಲೂಕು ಪಂಚಾಯತ್‌ಗೆ ಕಳುಹಿಸಲಾಗಿದೆ. ತಾಲೂಕಿನ 36 ಗ್ರಾಮ ಪಂಚಾಯತ್‌ಗಳ ಪೈಕಿ ಇನ್ನೂ 11 ಗ್ರಾಮ ಪಂಚಾಯತ್‌ಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿಲ್ಲ. ಈ ಬಗ್ಗೆ ತಾಪಂ ಸಿಬ್ಬಂದಿ ವಿಚಾರಿಸಿದಾಗ ಗುರುವಾರ ವಿತರಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮುದೇನೂರು ಗ್ರಾಮದ ಹುಸೇನಪ್ಪ ಮುದೇನೂರು, ದಾನಿಗಳು ನೀಡಿದ ಆಹಾರದ ಕಿಟ್ಗಳನ್ನು ಸಕಾಲದಲ್ಲಿ ಮುಟ್ಟಿಸಬೇಕಿತ್ತು. ಹಾಗೆಯೇ ಇಟ್ಟಿರುವುದು ಆಹಾರ ಸಾಮಾಗ್ರಿ ಇಲಿ, ಹೆಗ್ಗಣ ಪಾಲಾಗುವ ಸಾಧ್ಯತೆಗಳಿವೆ ಎಂದು ಆತಂಕ ತೋಡಿಕೊಂಡಿದ್ದಾರೆ.
TAGGED:
ಕೊಪ್ಪಳ ಸುದ್ದಿ