ಕರ್ನಾಟಕ

karnataka

By

Published : May 12, 2021, 2:25 PM IST

ETV Bharat / state

ರಾಜ್ಯಾದ್ಯಂತ ಬೆಡ್​ಗಳ ಬಿಕ್ಕಟ್ಟು... ಈ ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳ ವಾಸ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚಾಗ್ತಿದ್ದು, ಬೆಡ್​ಗಳು ಸಿಗದೇ ಕೊರೊನಾ ರೋಗಿಗಳು ನರಳುವಂತಹ ಸ್ಥಿತಿ ಎದುರಾಗಿದೆ. ಆದ್ರೆ ಕೊಪ್ಪಳ ಜಿಲ್ಲಾಸ್ಪತ್ರೆ ಮಾತ್ರ ನಾಯಿಗಳ ವಾಸ ಸ್ಥಾನವಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ.

Koppal district hospital, dog staying place of Koppal district hospital, Koppal district hospital news, ಕೊಪ್ಪಳ ಜಿಲ್ಲಾಸ್ಪತ್ರೆ, ನಾಯಿ ತಂಗುವ ಸ್ಥಳವಾದ ಕೊಪ್ಪಳ ಜಿಲ್ಲಾಸ್ಪತ್ರೆ, ಕೊಪ್ಪಳ ಜಿಲ್ಲಾಸ್ಪತ್ರೆ ಸುದ್ದಿ,
ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳ ವಾಸಸ್ಥಾನ

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಿಗಳಿಗೆ ಬೆಡ್​ ಸಿಗದೆ ಪರದಾಡುತ್ತಿದ್ದಾರೆ. ಆದ್ರೆ ನಗರದ ಜಿಲ್ಲಾಸ್ಪತ್ರೆ ನಾಯಿಗಳ ವಾಸ ಸ್ಥಾನವಾಗಿದೆಯಾ ಎಂಬ ಅನುಮಾನಗಳು ಮೂಡಿವೆ.

ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳ ವಾಸ

ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತೆ ಕೊಠಡಿಯೊಂದು ನಾಯಿಯ ವಾಸ ಸ್ಥಳವಾಗಿದೆ. ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಕೊಠಡಿಯೊಂದರೊಳಗೆ ನಾಯಿಯೊಂದು ಬೀಡುಬಿಟ್ಟಿದೆ.

ಈ ಮೊದಲು ಆ ಕೊಠಡಿಯಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತಿತ್ತು. ಈಗ ಲಸಿಕೆ ಹಾಕುವ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಖಾಲಿ ಇರುವ ಈ ಕೊಠಡಿಯಲ್ಲಿ ನಾಯಿ ಬಂದು ಮಲಗಿಕೊಂಡಿದೆ. ಸಿಬ್ಬಂದಿ ಅಲ್ಲಿಯೇ ಓಡಾಡುತ್ತಿದ್ದರೂ ಸಹ ನಾಯಿಯನ್ನು ಓಡಿಸದೆ ಸುಮ್ಮನಿದ್ದರು. ಇದು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಓದಿ:ರಾಜಧಾನಿಯಲ್ಲಿ 2ವಾರದಲ್ಲಿ ಕೋವಿಡ್ ಹತೋಟಿಗೆ.. ಗ್ರಾಮೀಣ ಪ್ರದೇಶದಲ್ಲಿ ಏರಿಕೆ.. ಸಚಿವ ಡಾ. ಸುಧಾಕರ್

ABOUT THE AUTHOR

...view details