ಕುಷ್ಟಗಿ(ಕೊಪ್ಪಳ):ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಡ್ರಗ್ಸ್ ಅವಶ್ಯಕತೆ ಹೇಳಿಕೆಯಿಂದ ಅವರಿಗೆ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ.
ಬಯ್ಯಾಪುರ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯ : ದೊಡ್ಡನಗೌಡ ಪಾಟೀಲ - ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
ಡ್ರಗ್ಸ್ ಅವಶ್ಯಕತೆಯ ಬಗ್ಗೆ ಪ್ರತಿಪಾದಿಸಿರುವ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಅವರ ಈ ಹೇಳಿಕೆಯಿಂದ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ..
ಬಯ್ಯಾಪುರ ಅವರಿಗೆ ಜನರ ಆರೋಗ್ಯಗಿಂತ ಅಧಿಕಾರವೇ ಮುಖ್ಯವಾಗಿದೆ: ದೊಡ್ಡನಗೌಡ ಪಾಟೀಲ
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊಪ್ಪಳದಲ್ಲಿ ಬಯ್ಯಾಪುರ ನೀಡಿರುವ ಹೇಳಿಕೆ ವಿಚಿತ್ರವಾಗಿದೆ. ಡ್ರಗ್ಸ್ ಅವಶ್ಯಕತೆಯ ಬಗ್ಗೆ ಪ್ರತಿಪಾದಿಸಿರುವ ಅವರಿಗೆ ಜನರ ಆರೋಗ್ಯಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಅವರ ಈ ಹೇಳಿಕೆಯಿಂದ ತಲೆ ಸರಿಯಾಗಿಲ್ಲವೇನೋ ಅನಿಸುತ್ತದೆ.
ಜನರ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿರುವ ಡ್ರಗ್ಸ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಹಣ ಚೆಲ್ಲಿ ಅಧಿಕಾರಗಿಟ್ಟಿಸಿಕೊಂಡಿರುವ ಅವರಿಗೆ, ಜನರ ಆರೋಗ್ಯ ಬೇಕಿಲ್ಲ ಎನ್ನುವುದನ್ನ ಈ ಹೇಳಿಕೆಯೇ ಪುಷ್ಟೀಕರಿಸಿದೆ ಎಂದು ಕಿಡಿಕಾರಿದ್ದಾರೆ.
Last Updated : Oct 4, 2020, 4:24 PM IST