ಕರ್ನಾಟಕ

karnataka

ETV Bharat / state

ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ: ಆಸ್ಪತ್ರೆಗೆ ಮುತ್ತಿಗೆ

ತೀವ್ರ ಅಸ್ವಸ್ಥನಾಗಿದ್ದ ವ್ಯಕ್ತಿಯನ್ನು ಯುವಕರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಲ್ಲಿನ ವೈದ್ಯೆ ಚಂದ್ರಬಾಯಿ ಕನಿಷ್ಠ ಪಕ್ಷ ರೋಗಿಯನ್ನು ಪರೀಕ್ಷಿಸಲು ಹೋಗದೇ ಗಂಗಾವತಿಗೆ ಕರೆದೊಯ್ಯುವಂತೆ ಹೇಳಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಆಸ್ಪತ್ರೆಯಲ್ಲಿನ ಅಂಬುಲೆನ್ಸ್ ಚಾಲಕನ ಬೇಜಾವಾಬ್ದಾರಿತನದಿಂದ ವಾಹನ ಸಕಾಲಕ್ಕೆ ಸಿಕ್ಕಿಲ್ಲ. ಹೀಗಾಗಿ ಖಾಸಗಿ ವಾಹನದಲ್ಲಿ ಗಂಗಾವತಿಗೆ ಸಾಗಿಸುತ್ತಿರುವ ಮಾರ್ಗ ಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

doctor-negligence-patient-death-in-gangavati
ಆನೆಗೊಂದಿ ಸರ್ಕಾರಿ ಆಸ್ಪತ್ರೆ

By

Published : May 15, 2021, 5:08 PM IST

ಗಂಗಾವತಿ: ತೀವ್ರ ಅಸ್ವಸ್ಥನಾಗಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿಕೊಂಡು ತಕ್ಷಣ ಚಿಕಿತ್ಸೆ ನೀಡಲು ವೈದ್ಯಾಧಿಕಾರಿ ಹಿಂದೇಟು ಹಾಕಿದ್ದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೇ ರೋಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ತಾಲ್ಲೂಕಿನ ಆನೆಗೊಂದಿಯಲ್ಲಿ ನಡೆದಿದೆ.

ವೈದ್ಯರ ನಿರ್ಲಕ್ಷ್ಯ ರೋಗಿ ಸಾವು ಆರೋಪ

ಹನುಮಂತಪ್ಪ ನಾಯಕ (56) ಆನೆಗೊಂದಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ತೀವ್ರ ಅಸ್ವಸ್ಥನಾಗಿದ್ದ ವ್ಯಕ್ತಿಯನ್ನು ಯುವಕರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಲ್ಲಿನ ವೈದ್ಯೆ ಚಂದ್ರಬಾಯಿ ಕನಿಷ್ಠ ಪಕ್ಷ ರೋಗಿಯನ್ನು ಪರೀಕ್ಷಿಸಲು ಹೋಗದೇ ಗಂಗಾವತಿಗೆ ಕರೆದೊಯ್ಯುವಂತೆ ಹೇಳಿದ್ದಾರೆ.

ಆ ಸಮಯದಲ್ಲಿ ಆಸ್ಪತ್ರೆಯಲ್ಲಿನ ಅಂಬುಲೆನ್ಸ್ ಚಾಲಕನ ಬೇಜಾವಾಬ್ದಾರಿತನದಿಂದ ವಾಹನ ಸಕಾಲಕ್ಕೆ ಸಿಕ್ಕಿಲ್ಲ. ಹೀಗಾಗಿ ಖಾಸಗಿ ವಾಹನದಲ್ಲಿ ಗಂಗಾವತಿಗೆ ಸಾಗಿಸುತ್ತಿರುವ ಮಾರ್ಗ ಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಗ್ರಾಮದ ನೂರಾರು ಯುವಕರು ಆಸ್ಪತ್ರೆಗೆ ಮುತ್ತಿಗೆ ಹಾಕಿದರು. ಅಲ್ಲದೆ ವೈದ್ಯ ಸಿಬ್ಬಂದಿಯನ್ನು ಥಳಿಸಲು ಮುಂದಾದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ABOUT THE AUTHOR

...view details