ಕರ್ನಾಟಕ

karnataka

ETV Bharat / state

ದೀಪಾವಳಿ ಬಲಿಪಾಡ್ಯಮಿ ಆಚರಣೆ ಹಿಂದೆ ಪೌರಾಣಿಕ ವಿಶೇಷತೆ ಇದೆ.. - ಅಮವಾಸ್ಯೆ ಮರುದಿನ ಬಲಿಪಾಡ್ಯಮಿ

ದೀಪಾವಳಿ ಹಬ್ಬದಲ್ಲಿ ಅಮಾವಾಸ್ಯೆ ಮರುದಿನ ಬಲಿಪಾಡ್ಯಮಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

Pandavas creat in cow dung
ಆಕಳು ಸಗಣಿಯಲ್ಲಿ ಪಾಂಡವರ ನಿರ್ಮಾಣ

By ETV Bharat Karnataka Team

Published : Nov 14, 2023, 6:54 PM IST

ಕೊಪ್ಪಳ:ಹಿಂದೂ ಧರ್ಮದ ಸಂಪ್ರದಾಯದಲ್ಲಿ ಒಂದೊಂದು ಆಚರಣೆ ಹಿಂದೆ ಒಂದೊಂದು ಸಂದೇಶ ಇರುತ್ತದೆ. ಹಾಗೆಯೇ ದೀಪಾವಳಿ ಬಲಿಪಾಡ್ಯಮಿ ಆಚರಣೆ ಹಿಂದೆಯೂ ಪೌರಾಣಿಕ ಹಿನ್ನೆಲೆ ಇದೆ. ಉತ್ತರ ಕರ್ನಾಟಕದಲ್ಲಿ ಐದು ದಿನಗಳ ಕಾಲ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ದೀಪಾವಳಿ ಅಮಾವಾಸ್ಯೆ ಮರುದಿನ ಆಚರಿಸಲ್ಪಡುವ ಬಲಿಪಾಡ್ಯಮಿ ಹಬ್ಬವೂ ಅನೇಕ ವಿಶೇಷತೆಯಿಂದ ಕೂಡಿದೆ.

ಪಾಂಡವರ ಆರಾಧನೆ: ಸಗಣಿಯಿಂದ ಮಾಡಿರುವ ಆಕೃತಿಗಳನ್ನು ಪಾಂಡವರು ಎಂಬ ಹೆಸರಿನಲ್ಲಿ ಆರಾಧನೆ ಮಾಡಲಾಗುತ್ತದೆ. ರೂಢಿಯಲ್ಲಿ ಹಟ್ಟಿಹಬ್ಬ ಎಂದು ಇದನ್ನು ಕರೆಯುವುದುಂಟು. ದೀಪಾವಳಿ ಅಮಾವಾಸ್ಯೆ ಮರುದಿನ ಕುರಿಗಾಹಿಗಳು ಹಟ್ಟಿಪೂಜೆ ಎಂದು ಆಚರಣೆ ಮಾಡಿದರೆ, ಗ್ರಾಮೀಣ ಭಾಗದಲ್ಲಿ ಪಾಂಡವರ ಹಬ್ಬ ಎಂದು ಆಚರಣೆ ಮಾಡಲಾಗುತ್ತಿದೆ.

ಆಕಳು ಸಗಣಿ ಬಳಸಿ ಆಕೃತಿ ನಿರ್ಮಾಣ: ದೀಪಾವಳಿ ಅಮವಾಸ್ಯೆಯ ಮರುದಿನ ಬಲಿಪಾಡ್ಯಮಿ ದಿನದಂದು ಬೆಳಗ್ಗೆ ಆಕಳಿನ ಸಗಣಿಯನ್ನು ತಂದು ಅದನ್ನು ಮೂರು ಆಕೃತಿಗಳನ್ನಾಗಿ ಮಾಡುತ್ತಾರೆ. ಹಳ್ಳಿಗರು ಇದನ್ನೂ ಪಾಂಡವರು ಎಂದು ಕರೆಯುವರು. ಈ ಆಕಳು, ಸಗಣಿಯ ಆಕೃತಿಗಳಿಗೆ ಹೂಗಳು, ಉತ್ತರಾಣಿ ಕಡ್ಡಿಗಳನ್ನಿಟ್ಟು ಸಿಂಗರಿಸುತ್ತಾರೆ. ಈ ಸಿಂಗರಿಸಿದ ಸಗಣೆ ಆಕೃತಿಗಳನ್ನು ಮನೆಯ ಮುಂದೆ ಹಾಗೂ ಬಾಗಿಲಿಗೆ ಇಟ್ಟು ಪೂಜೆ ಸಲ್ಲಿಸುತ್ತಾರೆ.

ಪೌರಾಣಿಕ ಹಿನ್ನೆಲೆ: ಈ ಬಲಿಪಾಡ್ಯಮಿ ಆಚರಣೆಗೆ ಪೌರಾಣಿಕ ಹಿನ್ನೆಲೆಯೂ ಇದೆ. ಬಲಿಚಕ್ರವರ್ತಿ ದೇವಲೋಕವನ್ನು ಗೆದ್ದುಕೊಂಡ ಮೇಲೆ ದೇವತೆಗಳು ದೇವಲೋಕವನ್ನು ತೊರೆಯಬೇಕಾಯಿತು. ಈ ವಿಷ್ಣು ದೇವನೂ ವಾಮನ ಅವತಾರ ತಾಳಿ ಬಲಿ ಚಕ್ರವರ್ತಿ ಬಳಿ ಬಂದು ತನಗೆ 3 ಹೆಜ್ಜೆ ಇಡಲು ಜಾಗ ನೀಡುವಂತೆ ಕೇಳುತ್ತಾನೆ.

ಒಂದು ಹೆಜ್ಜೆಯಿಂದ ಭೂಲೋಕ, ಇನ್ನೊಂದು ಹೆಜ್ಜೆಯಿಂದ ಆಕಾಶ ಮುಚ್ಚುತ್ತದೆ. ಆಗ ವಾಮನ ಇನ್ನೊಂದು ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಯ ಮೇಲೆ ಇಡು ಎಂದು ಕೇಳುತ್ತಾನೆ. ಆಗ ವಾಮನ ಬಲಿ ಚಕ್ರವರ್ತಿಯ ತಲೆಯ ಮೇಲೆ ಪಾದವನ್ನಿಟ್ಟು ಪಾತಾಳಕ್ಕೆ ತಳ್ಳುತ್ತಾನೆ. ಆಗ ಆತನ ಧರ್ಮನಿಷ್ಠೆ ಮೆಚ್ಚಿ ವಾಮನ ಅವತಾರದ ವಿಷ್ಣು ಪಾತಾಳದ ಅಧಿಪತ್ಯ ದಯಪಾಲಿಸುತ್ತಾನೆ. ಹೀಗಾಗಿ, ಬಲಿಪಾಡ್ಯಮಿ ಆಚರಣೆಗೆ ಬಂದಿದೆ.

ದುಷ್ಟ ಶಕ್ತಿ ಸಂಹಾರಕ್ಕೆ ಈ ಪೂಜೆ: ಸಗಣಿ ಗಣೇಶನ ರೂಪ. ಇದನ್ನು ಪೂಜೆ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿಂದ ಇದನ್ನು ಆಚರಣೆ ಮಾಡಲಾಗುತ್ತದೆ. ಇನ್ನು ದುಷ್ಟಶಕ್ತಿಗಳು ಬಾರದಿರಲಿ, ಮನೆಯಲ್ಲಿ ಸುಖ ಸಮೃದ್ದಿ ತುಂಬಿರಲಿ ಎಂಬ ಪ್ರಾರ್ಥನೆಯೊಂದಿಗೆ ಈ ಆಚರಣೆಯನ್ನು ಮಾಡಲಾಗುತ್ತದೆ. ಅಲ್ಲದೇ, ದನಕರುಗಳಿಗೂ ಒಳ್ಳೆಯದಾಗಲಿ ಎಂಬ ಆಶಯವೂ ಈ ಆಚರಣೆಯ ಹಿಂದೆ ಇದೆ. ಇನ್ನು ಸಗಣಿಯ ಆಕೃತಿ ಪಾಂಡವರನ್ನು ಪೂಜಿಸಿ ಬಳಿಕ ಅವುಗಳನ್ನು ಮನೆಯ ಮಾಳಿಗೆ ಮೇಲೆ ಇಡುವ ಪರಿಪಾಠವಿದೆ.

ಏನೇ ಆಗಲಿ, ನಮ್ಮ ದೀಪಾವಳಿ ಆಚರಣೆ, ನಮ್ಮ ಹೆಮ್ಮೆ ಎನ್ನುವುದು ಸುಳ್ಳಲ್ಲ. ಒಂದೊಂದು ಆಚರಣೆ ಹಿಂದೆಯೂ ವಿಶೇಷತೆ ಇರೋದು ನಮ್ಮ ನಾಡಿನ ಹೆಮ್ಮೆಯೇ ಸರಿ.

ಬಂಜಾರ ಸಮುದಾಯದಲ್ಲಿ ದೀಪಾವಳಿ ಹಬ್ಬ:ಉತ್ತರ ಕರ್ನಾಟಕದ ಬಂಜಾರ ಸಮುದಾಯವು ಐದು ದಿನ ಕಾಲ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಾಗಿ ಆಚರಿಸುತ್ತದೆ. ದೀಪಾವಳಿ ಆರಂಭದಿಂದ ಮುಗಿಯುವ ವರೆಗೆ ಬಂಜಾರ ಸಮುದಾಯದವರು ಮನೆಯಿಂದ ದನಕರುಗಳ ಸಗಣಿಯನ್ನ ಹೊರಗೆ ಚೆಲ್ಲುವುದಿಲ್ಲ. ಇದರಲ್ಲಿ ಲಕ್ಷ್ಮಿ ಇರ್ತಾಳೆ ಎಂಬ ನಂಬಿಕೆ ಅವರಲ್ಲಿರುತ್ತೆ. ಒಟ್ಟಾರೆ ಬಂಜಾರ ಜನಾಂಗಕ್ಕೆ ದೀಪಾವಳಿ ಅತಿದೊಡ್ಡ ಹಬ್ಬವಾಗಿದ್ದು, ಹತ್ತು ಹಲವು ವಿಶಿಷ್ಟತೆಯೊಂದಿಗೆ ಹಬ್ಬ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಇದನ್ನೂಓದಿ:ಸಣ್ಣೂರು ತಾಂಡಾ‌ದಲ್ಲಿ ಸಂಭ್ರಮದ ದೀಪಾವಳಿ ಆಚರಣೆ

ABOUT THE AUTHOR

...view details