ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವೃದ್ಧೆಗೆ ನೆಲದ ಮೇಲೆ ಬೆಡ್ ಹಾಕಿರುವ ಘಟನೆ ನಡೆದಿದೆ. ಇವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಜಿಲ್ಲಾಸ್ಪತ್ರೆಯಲ್ಲಿ ಮರೆಯಾದ ಮಾನವೀಯತೆ: ವೃದ್ಧೆಗೆ ನೆಲದ ಮೇಲೆ ಬೆಡ್ ಹಾಕಿದ ಸಿಬ್ಬಂದಿ
ಕೊರೊನಾ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ 70 ವರ್ಷದ ವೃದ್ಧೆಗೆ ಕೋವಿಡ್ ವಾರ್ಡ್ನಲ್ಲಿರುವ ಮಹಿಳೆಯೋರ್ವರು ನೆರವು ನೀಡುತ್ತಿದ್ದಾರೆ. ಊಟ, ತಿಂಡಿ ಸೇರಿದಂತೆ ಮೇಲ್ವಿಚಾರಣೆಯನ್ನೂ ಇವರೇ ನೋಡಿಕೊಳ್ಳುತ್ತಿದ್ದು, ಕೋವಿಡ್ ನಡುವೆ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಮರೆಯಾದ ಮಾನವೀಯತೆ...ವೃದ್ಧೆಗೆ ನೆಲದ ಮೇಲೆ ಬೆಡ್ ಹಾಕಿದ ಸಿಬ್ಬಂದಿ
ಕೊರೊನಾ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ 70 ವರ್ಷದ ವೃದ್ಧೆಗೆ ಕೋವಿಡ್ ವಾರ್ಡ್ನಲ್ಲಿರುವ ಮಹಿಳೆಯೋರ್ವರು ನೆರವು ನೀಡುತ್ತಿದ್ದಾರೆ. ಊಟ, ತಿಂಡಿ ಸೇರಿದಂತೆ ಮೇಲ್ವಿಚಾರಣೆಯನ್ನೂ ಇವರೇ ನೋಡಿಕೊಳ್ಳುತ್ತಿದ್ದು, ಕೋವಿಡ್ ನಡುವೆ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆಯ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಕೊರತೆ ಎದುರಾಗಿದ್ಯಾ? ಎಂಬ ಅನುಮಾನ ಮೂಡಿದೆ. ಇದರ ಜೊತೆಗೆ ಸಿಬ್ಬಂದಿ ಕೋವಿಡ್ ಸೋಂಕಿತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರಾ? ಎಂಬ ಪ್ರಶ್ನೆಯೂ ಮೂಡಿದೆ.