ಕೊಪ್ಪಳ:ಗವಿಮಠ ಜಾತ್ರೆ ವಿಷಯಕ್ಕೆ ಸಂಬಂಧಿಸಿದಂತೆ ಗವಿಮಠ ವರ್ಸಸ್ ಜಿಲ್ಲಾಡಳಿತ ಎಂಬುದೇನೂ ಇಲ್ಲ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸ್ಪಷ್ಟಪಡಿಸಿದ್ದಾರೆ.
ಗವಿಮಠ ಜಾತ್ರೆಗೆ ಜಿಲ್ಲಾಡಳಿತ ಈವರೆಗೆ ಅನುಮತಿ ನೀಡಿಲ್ಲ: ಕೊಪ್ಪಳ ಡಿಸಿ - Gavimath Fair
ಗವಿಮಠ ಜಾತ್ರೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಈವರೆಗೆ ಅನುಮತಿ ನೀಡಿಲ್ಲ. ಜಾತ್ರೆ ನಡೆಯುತ್ತದೆ ಅಥವಾ ನಡೆಯುವುದಿಲ್ಲ ಎಂಬುವುದರ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಗವಿಮಠ ಜಾತ್ರೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಈವರೆಗೂ ಅನುಮತಿ ನೀಡಿಲ್ಲ. ಜಾತ್ರೆ ನಡೆಯುತ್ತದೆ ಅಥವಾ ನಡೆಯುವುದಿಲ್ಲ ಎಂಬುವುದರ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜಾತ್ರೆ ಕುರಿತು ಜನರು ಹಾಕುತ್ತಿರುವ ಅಭಿಪ್ರಾಯ ಅಧಿಕೃತ ನಿರ್ಧಾರವಾಗುವುದಿಲ್ಲ. ಜಾತ್ರೆಗೆ ಬರಬೇಕು ಅಥವಾ ಬರಬಾರದು ಎಂಬುದು ಜನರ ಆರೋಗ್ಯದ ವೈಯಕ್ತಿಕ ವಿಚಾರ. ಜಾತ್ರೆಗೆ ಸಂಬಂಧಿಸಿದಂತೆ ನಾನು ಸ್ವಾಮೀಜಿಗಳ ಜೊತೆಗೆ ಸಂಪರ್ಕದಲ್ಲಿದ್ದೇನೆ. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಯಾವುದೇ ತೀರ್ಮಾನ ಕೈಗೊಂಡರು ಸಹ ನಾವು ಬದ್ಧವಾಗಿರುತ್ತವೆ ಎಂದು ಶ್ರೀಗಳು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಮುಕ್ತವಾಗಿವೆ. ಜಾತ್ರೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಕೇವಲ ಅಭಿಪ್ರಾಯಗಳು ಅಷ್ಟೇ. ಆದರೆ ಅಂತಿಮವಾಗಿ ಜಿಲ್ಲಾಡಳಿತ ಹಾಗೂ ಶ್ರೀಮಠ ಚರ್ಚಿಸಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಶ್ರೀಮಠದ ಆಡಳಿತ ಮಂಡಳಿ ಜೊತೆ ಚರ್ಚಿಸಿ ತಮ್ಮ ತೀರ್ಮಾನವನ್ನು ತಿಳಿಸುವುದಾಗಿ ಶ್ರೀಗಳು ಹೇಳಿದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನ ಜಿಲ್ಲಾಡಳಿತದ ಗಮನಕ್ಕೆ ಬರಲಿದೆ. ನಂತರ ಜಿಲ್ಲಾಡಳಿತ ಅಂತಿಮ ತೀರ್ಮಾನ ಮಾಡಲಿದೆ. ಗವಿಮಠ ನಮ್ಮ ಜಿಲ್ಲೆಯ ಒಂದು ದೊಡ್ಡ ಆಸ್ತಿ. ನಮ್ಮ ಜಿಲ್ಲೆಯ ಒಳಿತಿಗಾಗಿ ಜಿಲ್ಲಾಡಳಿತದ ಜೊತೆಗೆ ಶ್ರೀಮಠ ಇರುತ್ತದೆ ಎಂದು ಭಾವಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಕಿಶೋರ್ ಕಿಶೋರ್ ವಿಕಾಸ್ ಕಿಶೋರ್ ಸುರಲ್ಕರ್ ಹೇಳಿದ್ದಾರೆ.