ಕರ್ನಾಟಕ

karnataka

By

Published : Sep 2, 2020, 7:11 PM IST

Updated : Sep 2, 2020, 7:54 PM IST

ETV Bharat / state

ಕುಷ್ಟಗಿ: 1,817 ಆಯ್ದ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳ ವಿತರಣೆ

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಕುಷ್ಟಗಿ ತಾಲೂಕಿನ 1,817 ಆಯ್ದ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳ ವಿತರಣೆ ಮಾಡಲಾಯಿತು.

ಆಯ್ದ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳ ವಿತರಣೆ
ಆಯ್ದ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳ ವಿತರಣೆ

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಲ್ಲಿ ತಾಲೂಕಿನ 20 ಗ್ರಾಮ ಪಂಚಾಯಿತಿಗಳ ಆಯ್ದ ಫಲಾನುಭವಿಗಳಿಗೆ 10 ಕೋಳಿ ಮರಿಗಳನ್ನು ವಿತರಿಸಲಾಯಿತು.

ಆಯ್ದ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳ ವಿತರಣೆ

ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ. ಅಖಿಲ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ರಾಷ್ಟ್ರೀಯ ಜಾನುವಾರು ಮಿಷನ್ (ಎನ್.ಎಲ್.ಎಂ) ಯೋಜನೆಯಲಿ ತಾಲೂಕಿನ 20 ಗ್ರಾ,ಪಂ.ಗಳಲ್ಲಿ 71 ಎಸ್ಸಿ, ಎಸ್ಟಿ, 165 ಇತರೇ ಒಟ್ಟು 236 ಫಲಾನುಭವಿಗಳಿಗೆ 1,817 ಗಿರಿರಾಜ ಕೋಳಿಮರಿಗಳನ್ನು ವಿತರಿಸಲಾಗುತ್ತಿದೆ.

ಸಾಮಾನ್ಯವಾಗಿ ಗಿರಿರಾಜ ಕೋಳಿ ಮಾಂಸದಲ್ಲಿ ಶೇ. 50ರಿಂದ 60ರಷ್ಟು ಪ್ರೋಟೀನ್ ಅಂಶವಿದೆ. ಇದರ ಮಾಂಸ ಸೇವನೆಯಿಂದ ಪ್ರೋಟೀನ್ ಪೋಷಕಾಂಶ ನೇರವಾಗಿ ಸಿಗುತ್ತಿದ್ದು, ಸಕಾಣಿಕೆಯಿಂದ ಆದಾಯವೂ ವೃದ್ಧಿಸಲಿದೆ ಎಂದರು.

Last Updated : Sep 2, 2020, 7:54 PM IST

ABOUT THE AUTHOR

...view details