ಕರ್ನಾಟಕ

karnataka

By

Published : Sep 6, 2020, 2:36 PM IST

ETV Bharat / state

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ 4ಡಿ ತಂತ್ರಜ್ಞಾನದ ಸಲಕರಣೆ ವಿತರಿಸಿದ ಸಾಫ್ಟ್​ವೇರ್​ ಸಂಸ್ಥೆ

ಮಕ್ಕಳ ಪರಿಸರಕ್ಕೆ ಪೂರಕವಾಗಿ ಕಲಿಕಾ ಸನ್ನಿವೇಶ ನಿಮಾರ್ಣಕ್ಕೆ ನೆರವು ನೀಡಬಲ್ಲ ತಂತ್ರಜ್ಞಾನ ಆಧಾರಿತ ಎಆರ್ ಫ್ಲಾಶ್ ಕಾರ್ಡ್​ಗಳ 50 ಸೆಟ್​ಗಳನ್ನು ಉಚಿತವಾಗಿ ನೀಡಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಉಚಿತ 4 ಡಿ ತಂತ್ರಜ್ಞಾನದ ಸಲಕರಣೆ ವಿತರಣೆ
ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಉಚಿತ 4 ಡಿ ತಂತ್ರಜ್ಞಾನದ ಸಲಕರಣೆ ವಿತರಣೆ

ಗಂಗಾವತಿ: ಸರ್ಕಾರಿ ಶಾಲೆಯಲ್ಲಿನ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಬೆಂಗಳೂರಿನ ಸಾಫ್ಟ್​​ವೇರ್ ಸಂಸ್ಥೆಯೊಂದು ತಾಲ್ಲೂಕಿನ ಕುಂಟೋಜಿ-ಡಗ್ಗಿ ಶಾಲೆಗೆ 4ಡಿ ಆ್ಯನಿಮೇಷನ್ ಇರುವ 50 ಸೆಟ್​ಗಳನ್ನು ಉಚಿತವಾಗಿ ಪೂರೈಸಿದೆ.

ಮಕ್ಕಳ ಪರಿಸರಕ್ಕೆ ಪೂರಕವಾಗಿ ಕಲಿಕಾ ಸನ್ನಿವೇಶ ನಿಮಾರ್ಣಕ್ಕೆ ನೆರವು ನೀಡಬಲ್ಲ ತಂತ್ರಜ್ಞಾನ ಆಧಾರಿತ ಎಆರ್ ಫ್ಲಾಶ್ ಕಾರ್ಡ್​ಗಳ 50 ಸೆಟ್​ಗಳನ್ನು (ಅಂದಾಜು ಮೌಲ್ಯ 20 ಸಾವಿರ ಮೊತ್ತ) ಬೆಂಗಳೂರಿನ ಹುಲ್ಸೆನೆಟ್ ಕಂಪನಿಯ ಸಿಇಒ ರಾಕೇಶ್ ನೀಡಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಉಚಿತ 4 ಡಿ ತಂತ್ರಜ್ಞಾನದ ಸಲಕರಣೆ ವಿತರಣೆ

ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವ ಈ ಹೊತ್ತಿನಲ್ಲಿ ಇಂತಹ ಸಂಸ್ಥೆಗಳು ಇಡುತ್ತಿರುವ ಹೆಜ್ಜೆಗಳು ಸಮುದಾಯದಲ್ಲಿ ಧನಾತ್ಮಕ ಭಾವನೆ ಮೂಡಲು ಕಾರಣವಾಗುತ್ತವೆ ಎಂದು ಮಕ್ಕಳ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಾಣಿಗಳ ಜೀವಂತಿಕೆಯಂತೆ ತೋರುವ, ಸಂಚಾರಿ ವಾಹನ, ಮೂಲಾಕ್ಷರಗಳ ಬಗೆಗಿನ ಕಾರ್ಡ್​ ನೀಡಲಾಗಿದೆ. ಇದರಿಂದ ಮಕ್ಕಳು ಸೃಜನಶೀಲರಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬಹುದು ಎಂದು ಶಾಲೆಯ ಶಿಕ್ಷಕ ಸೋಮು ಕುದರಿಹಾಳ ಸಂತಸ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details